ಮಡಂತ್ಯಾರು: ಈ ಬಾರಿಯ ರೋಟರಿ ಜಿಲ್ಲಾ ಪಾಜೆಕ್ಟ್ ಆದ ಅಂಗನವಾಡಿಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಮಡಂತ್ಯಾರು ಗ್ರಾಮ ವ್ಯಾಪ್ತಿಯ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಆಟದ ಮೈದಾನ ಹಾಗೂ ಹೊರಾಂಗಣ ಆಟದ ಸಾಮಾಗ್ರಿ ನಿರ್ಮಾಣ ಮಾಡುವರೇ ಮಡಂತ್ಯಾರು ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ 8 ಅಂಗನವಾಡಿಗಳನ್ನು ಆಯ್ಕೆ ಮಾಡಲಾಗಿ ಪ್ರಥಮವಾಗಿ ಪಾರೆಂಕಿ ಅಂಗನವಾಡಿಯಲ್ಲಿ ಇಂದು ಉದ್ಘಾಟನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು.
ರೋಟರಿ ಕ್ಲಬ್ ವತಿಯಿಂದ 10000 ಮೌಲ್ಯದ ಉಯ್ಯಾಲೆ ಹಾಗೂ ಇತರ ಹೊರಂಗಣ ಆಟದ ಸಾಮಗ್ರಿಯನ್ನು ಇಂದು ಹಸ್ತಾಂತರಿಸಲಾಯಿತು.ಇದೇ ರೀತಿ ಉಳಿದ 7 ಅಂಗನವಾಡಿ ಗಳಿಗೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಡಂತ್ಯಾರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶಶಿಪ್ರಭಾ ಉದ್ಘಾಟಿಸಿ ಶುಭಹಾರೈಸಿದರು.
ಮಡಂತ್ಯಾರ್ ರೋಟರಿ ಕ್ಲಬ್ ನ ಅಧ್ಯಕ್ಷರು ಪಿ.ಎಚ್.ಎಫ್ ಶ್ರೀಧರ ರಾವ್ ಹಾಗೂ ಕಾರ್ಯದರ್ಶಿ ನಿತ್ಯಾನಂದ ಬಿ. ಮತ್ತು ಪಿ.ಎಚ್.ಎಫ್ ಜಯಂತ ಶೆಟ್ಟಿ, ಕಾಂತಪ್ಪ ಗೌಡ, ದಿನಕರ ಶೆಟ್ಟಿ ಇತರ ಸದಸ್ಯರು ಹಾಗೂ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು, ಪಿ.ಡಿ.ಒ ಮತ್ತು ಗ್ರಾಮದ ಎಲ್ಲಾ ಅಂಗನವಾಡಿಯ ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು.