ಬೆಳ್ತಂಗಡಿ: ಮಣಿಪುರದಲ್ಲಿ ಮೇ.4ರಂದು ಆರಂಭವಾದ ಗಲಭೆ ಎಂಬತ್ತು ದಿನಗಳು ಕಳೆದರು ನಿಯಂತ್ರಿಸಲು ಸಂಪೂರ್ಣವಾಗಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ವಿಫಲವಾಗಿದ್ದು, ಗಲಭೆಯ ಕರಾಳ ಮುಖಗಳು ಬಯಲಾಗುತ್ತಿದ್ದು ಅತ್ಯಂತ ಅಮಾನವೀಯ ಹಾಗೂ ಪೈಶಾಚಿಕೆವಾಗಿ ಈ ದೇಶದ ಮಹಿಳೆಯ ಮಾನವನ್ನು ಹರಾಜು ಮಾಡಿ ತಿಂಗಳುಗಳು ಕಳೆದರು ಎಫ್ ಐ ಆರ್ ದಾಖಲಿಸಿ ಕ್ರಮ ಜರುಗಿಸಿ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸಂಪೂರ್ಣವಾಗಿ ವಿಫಲವಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಇಂದು (ಜು.24ರಂದು) ಪ್ರತಿಭಟನೆಯನ್ನು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಮಿನಿ ವಿಧಾನಸೌಧದವರೆಗೆ ಹಮ್ಮಿಕೊಳ್ಳಲಾಯಿತು.ಸಂಬಂಧ ಪಟ್ಟವರಿಗೆ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿ ಮತ್ತು ಪ್ರದಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೆಳ್ತಂಗಡಿಯ ವಿವಿಧ ಕ್ರೈಸ್ತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಹಿ, ಬೆಳ್ತಂಗಡಿ ಹೊಲಿ ರೆಡೀಮರ್ ಚರ್ಚ್ ಪ್ರಧಾನ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೋ, ಮಾನ್ಸಿಂಜರ್ ಫಾ. ವಲಿಯ ಪರಂಬಿಲ್, ಕಾಂಗ್ರೆಸ್ ಪ್ರಮುಖರಾದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಕೆ.ವಸಂತ ಬಂಗೇರ, ಕರ್ನಾಟಕ, ಶಾಲೆಟ್ ಪಿಂಟೊ, ಸುಪ್ರಿಯಾ, ಸೇವಿಯಾರ್ ಪಾಲೆಲಿ, ಸೆಬಾಸ್ಟಿಯನ್, ಲಿಯೋ ರೋಡ್ರಿಗಸ್, ಕೆಎಸ್ಎಂಸಿ ನಿರ್ದೇಶಕ ಫಾ. ಶಾಜೀ, ವಿಜಯ ಸಿಕ್ವೇರಾ, ಅಲೋಶಿಯಸ್ ಲೋಬೊ, ಲಾನ್ಸಿ ಪಿರೇರಾ, ಜೆಸಿಂತಾ ಮೋನಿಸ್, ವಿನ್ಸೆಂಟ್ ಡಿಸೋಜಾ, ರಾಜೇಶ್, ಮೋಹನ್ ಕೆ.ಸಿ, ಬಿಟ್ಟಿ ನೆಡುನೀಲಂ, ರೇಜಿ, ಫಾ.ಸೆಬಾಸ್ಟಿಯನ್, ಫಾ.ಜೇಮ್ಸ್ ಡಿಸೋಜ, ಫಾ.ಎಲಿಯಸ್ ಡಿಸೋಜಾ, ಆಂಟೋನಿ ಪಿ.ಜೇ.ಅನಿಲ್ ಏ. ಜೇ., ಎಂ.ಜೇ ಸೆಬಾಸ್ಟಿಯನ್, ಜೈಸನ್ ಪಟ್ಟೇರಿಲ್, ವಿನ್ಸೆಂಟ್ ಡಿಸೋಜಾ, ವಾಲ್ಟರ್ ಮೋನಿಸ್, ಸೀರೋಮಲಬಾರ್ ಕ್ಯೆಥೋಲಿಕ್ ಅಶೋಸಿಯೇಷನ್, ಮಾತ್ರ್ ವೇದಿಕೆ ಮಹಿಳಾ ಘಟಕ, ಕಥೋಲಿಕ ಸಭಾ ಬೆಳ್ತಂಗಡಿ ವಲಯ,ಸಿ ಎಸ್ ಐ ಚರ್ಚ್, ಪೆಂಟ ಕೊಸ್ಟಲ್ ಚರ್ಚ್ ಗಳು ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ಮುಖ್ಯಸ್ಥ ರು ಸಾವಿರಾರು ಸಂಖ್ಯೆಯಲ್ಲಿ ಬೆಳ್ತಂಗಡಿ ತಾಲೂಕಿನ ಕ್ರೈಸ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.