

ಬೆಳ್ತಂಗಡಿ: ತಾಲೂಕಿನಾದ್ಯಂತ ಭಾರೀ ಮಳೆಯಾಗುತಿದ್ದು ಹಲವಾರು ಕಡೆಗಳಲ್ಲಿ ಹಾನಿ ಸಂಭವಿಸಿದೆ.

ಇಂದಬೆಟ್ಟು ಗ್ರಾಮದ ಜಾಕೋಬ್ ಮೊನಿಸ್ ಬಿನ್ ಪೌಲ್ ಮೊನಿಸ್ ರವರ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಗೋಡೆ ಬಿರುಕು ಬಿಟ್ಟಿದೆ.

ಮೊಗ್ರು ಗ್ರಾಮದ ಪರಕ್ಕಾಜೆ ಎಂಬಲ್ಲಿ ಶೀನಪ್ಪ ಗೌಡ ರವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿರುತ್ತದೆ.

ಪಡಂಗಡಿ ಗ್ರಾಮದ ರಿಚರ್ಡ್ ಗೋವಿಯಸ್ ರವರ ಮನೆಯ ಪಕ್ಕ ಗುಡ್ಡ ಕುಸಿದು ಹಾನಿ ಸಂಭವಿಸಿದೆ.

ಮಾಲಾಡಿ ಗ್ರಾಮದ ಅಶೋಕ್ ಶೆಣೈ ಅವರ ಕಾಂಪೌಂಡ್ ಕುಸಿದಿದೆ.