ಕುವೆಟ್ಟು ಬಳಿ ಮಳೆಗೆ ದೊಡ್ಡ ಗಾತ್ರದ ಮರ‌‌ ಬಿದ್ದು ವಿದ್ಯುತ್ ಕಂಬ ಧರಾಶಾಹಿ

0

ಕುವೆಟ್ಟು: ಕುವೆಟ್ಟು ಶಾಲೆಯ ಬಳಿ 250 ವರ್ಷದ‌ ದೊಡ್ಡ ಗಾತ್ರದ ಮರವೊಂದು ಭಾರಿ ಮಳೆಗೆ ಬಿದ್ದ ಘಟನೆ ಜು.21 ರಂದು ಬೆಳ್ಳಂಬೆಳ್ಳಗ್ಗೆ ನಡೆದಿದೆ.

ಶಾಲೆಯ ಪಕ್ಕದಲ್ಲಿಯೇ ಇದ್ದ ದೊಡ್ದ ಗಾತ್ರದ ಮರ ಬಿದ್ದ ಪರಿಣಾಮವಾಗಿ 6 ವಿದ್ಯುತ್ ಕಂಬಗಳು ಧರೆಗೆ ಉರುಳಿದೆ.ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಅಗಿದ್ದು ಸಾರ್ವಜನಿಕರಿಗೂ ಹಾಗೂ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಘಟನಾ ಸ್ಥಳದ ಪಕ್ಕದ ಮನೆಯವರಾದ ಅಲ್ಫೊನ್ಸೊ ಫ್ರಾಂಕೊ ಮುಂಜಾನೆಯೇ ಕೆಇಬಿ ಗೆ ಕರೆ ಮಾಡಿ ವಿಶಯವನ್ನು ತಿಳಿಸಿದ್ದಾರೆ.ಬಳಿಕ ಕೆಇಬಿಯವರು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ.

LEAVE A REPLY

Please enter your comment!
Please enter your name here