ಜು.23: ಬೆಳ್ತಂಗಡಿ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ- ಸುವರ್ಣ ವರ್ಷಾಚರಣೆ- 50 ವಿಶಿಷ್ಟ ಕಾರ್ಯಕ್ರಮಗಳು, ಲಯನ್ಸ್ ಭವನ ನವೀಕರಣ

0

ಬೆಳ್ತಂಗಡಿ: 2023-24ನೇ ಸಾಲಿನಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ 50ನೇ ಸೇವಾ ಸಂಭ್ರಮ ವರ್ಷಾಚರಣೆ ಆಚರಿಸಲು ನಿರ್ಧರಿಸಿದ್ದು ಆ ಹಿನ್ನೆಲೆಯಲ್ಲಿ 50 ವಿಶಿಷ್ಟ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಲಯನ್ಸ್ ಕ್ಲಬ್‌ ನಿಯೋಜಿತ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ತಿಳಿಸಿದರು.ಬೆಳ್ತಂಗಡಿ ಪತ್ರಿಕಾಭವನದಲ್ಲಿ ಜು.19 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ 50 ನೇ ವರ್ಷದ ನೂತನ ಸಮಿತಿಯ ಪದಗ್ರಹಣ ಜು.23 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಲಿದೆ ಲಯನ್ಸ್ ಜಿಲ್ಲಾ ದ್ವಿತೀಯ ರಾಜ್ಯಪಾಲ ಕುಟ್ಟಿ ಅರವಿಂದ ಶೆಣೈ, ಪದಗ್ರಹಣ ನಡೆಸಿಕೊಡಲಿದ್ದಾರೆ.ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಶರತ್‌ಕೃಷ್ಣ ಪಡುವೆಟ್ನಾಯ, ಪೊಲೀಸ್‌ ವೃತ್ತ ನಿರೀಕ್ಷಕ ಶಿವಕುಮಾರ್,ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಜಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ ಎಂದರು.

ಪದಗ್ರಹಣದಂದು 10 ವಿದ್ಯಾರ್ಥಿಗಳಿಗೆ ಸ್ಟಾಕರ್‌ ಶಿಪ್‌, 5 ಮಂದಿ ಪೌರ ಕಾರ್ಮಿಕರಿಗೆ ಸನ್ಮಾನ, ಓರ್ವ ಅರ್ಹ ಮಧುಮಗಳಿಗೆ ಧಾರಾಸೀರ ವಿತರಣೆ, ಇಬ್ಬರು ಅರ್ಹ ಫಲಾನುಭವಿಗಳಿಗೆ ಆರೋಗ್ಯ ಸಹಾಯಧನ ವಿತರಣೆ, ಇತರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಸೇರಿ 50 ಮಂದಿಗೆ ಸೇವಾ ಕಾರ್ಯ ನಡೆಯಲಿದೆ. ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಲಯನ್ಸ್ ಕುಟುಂಬದ ನಿರೀಕ್ಷಾ ಎನ್.ನಾವರ ಅವರಿಗೆ ಸನ್ಮಾನ ಮತ್ತು ಕಳೆದ ಸಾಲಿನಲ್ಲಿ ಸರಕಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.
ಬೆಳ್ತಂಗಡಿ ನಗರದಲ್ಲಿರುವ ಲಯನ್ಸ್ ಭವನವನ್ನು ನವೀಕರಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು, ಕಳೆದ 49 ವರ್ಷಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ನಮ್ಮ ಜೊತೆಗಿರುವವ ನೇತೃತ್ವದಲ್ಲಿ ಒಂದೊಂದು ಕಾರ್ಯಕ್ರಮ ಆಯೋಜಿಸಿ ಅವರನ್ನೂ ಸನ್ಮಾನಿಸಲಾಗುವುದು.
ಉಳಿದಂತೆ ವಿವಿಧ ಸೇವಾ ಸಂಘಟನೆಗಳ ಜೊತೆ ಸೇರಿಕೊಂಡು ಕೈಗೊಳ್ಳುವ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಇತ್ಯಾಧಿ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸಿಕೊಂಡು ಬರಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ , ಕಾರ್ಯದರ್ಶಿ ಅನಂತಕೃಷ್ಣ ಕೋಶಾಧಿಕಾರಿ ಸುಭಾಷಿಣಿ,ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ವಸಂತ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಯ, ಕಾರ್ಯದರ್ಶಿ ತುಕಾರಾಮ ಬಿ, ನಿಯೋಜಿತ ಪತ್ರಿಕಾ ಪ್ರತಿನಿಧಿ ಅಶ್ರಫ್ ಆಲಿಕುಂಞ, ಹಿರಿಯ ಸದಸ್ಯ ಹೆಚ್.ರಾಮಕೃಷ್ಣ ಗೌಡ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here