ಕರ್ತವ್ಯವನ್ನು ಪ್ರೀತಿಸಿದಾಗ ಯಶಸ್ಸು ನಮ್ಮದಾಗುವುದರಲ್ಲಿ ಸಂದೇಹವಿಲ್ಲ: ಡಿ. ಹರ್ಷೇಂದ್ರ ಕುಮಾರ್

0

ಉಜಿರೆ: ಒಂದು ವಿದ್ಯಾಸಂಸ್ಥೆಯು ಉನ್ನತ ಸ್ಥಾನಕ್ಕೆ ಏರಬೇಕಾದಲ್ಲಿ ಪ್ರತಿಯೊಂದು ದರ್ಜೆಯ ಸಿಬ್ಬಂದಿಗಳ ಪರಿಪೂರ್ಣ ಸೇವೆಯು ಅತ್ಯಾವಶ್ಯಕವಾಗಿರುತ್ತದೆ. ಆಗ ವಿದ್ಯಾಸಂಸ್ಥೆಯು ಎತ್ತರದ ಸ್ಥಾನವನ್ನು ತಲುಪಿದಾಗ ಸಿಬ್ಬಂದಿಗಳೂ ಅತ್ಯಂತ ಯಶಸ್ಸಿಗಳಾಗುವುದರಲ್ಲಿ ಸಂದೇಹವಿಲ್ಲ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ರವರು ನುಡಿದರು.

ಶ್ರೀ ಧ.ಮಂ.ಪ.ಪೂ. ಕಾಲೇಜಿನಲ್ಲಿ ಎಸ್.ಡಿ.ಎಂ.ಎಜುಕೇಶನಲ್ ಸೊಸ್ಶೆಟಿಯ ಆಡಳಿತಕ್ಕೊಳಪಟ್ಟ ಎಲ್ಲಾ ವಿದ್ಯಾ ಸಂಸ್ಥೆಗಳ ಕಛೇರಿ ಸಿಬ್ಬಂದಿಗಳ ‘ಕಛೇರಿ ನಿರ್ವಹಣೆ ಮತ್ತು ಆಡಳಿತ’ ತರಬೇತಿಯ ಸಮಾರೋಪ ಸಮಾರಂಭದ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಅವರು ತಮ್ಮ ಅನುಭವದ ಬುತ್ತಿಯಿಂದ ನಗುಮುಖವನ್ನು ಹೊಂದಿ, ಸಂಯಮದಿಂದ ವರ್ತಿಸಿ, ವೃತ್ತಿಪರತೆಯನ್ನು ಸಾಧಿಸುವ ಮಾರ್ಗದರ್ಶನವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಎಸ್ ಸತೀಶ್ಚಂದ್ರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಜೇಸಿಐನ ರಾಷ್ಟ್ರೀಯ ತರಬೇತುದಾರರಾದ ಜೇಸಿ ಕೃಷ್ಣಮೋಹನ್ ಪಿ. ಎಸ್. ರವರು ನಡೆಸಿಕೊಟ್ಟರು ಹಾಗೂ ವಿವಿಧ ತಾಂತ್ರಿಕ ವಿಷಯಗಳ ತರಬೇತಿಯನ್ನು ವಿಷಚಿತಜ್ಞರಾದ ಶ್ರೀ ಅರವಿಂದ್, ಶ್ರೀ ಸತೀಶ್ ಹಾಗೂ ಶ್ರೀ ಹರೀಶ್ ಎಂ. ವೈ ರವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವಿವಿಧ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಿವರ್ಗದವರು ಉಪಸ್ಥಿತರಿದ್ದರು. ಡಾ. ಬಿ. ಎ. ಕುಮಾರ ಹೆಗ್ಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here