ಕುಕ್ಕೇಡಿ: ಮಂಜುಶ್ರೀ ಭಜನಾ ಮಂಡಳಿ ರಿ. ಕುಂಡದಬೆಟ್ಟು ಕುಕ್ಕೇಡಿ ನಿಟ್ಟಡೆ ಇದರ ವಾರ್ಷಿಕ ಮಹಾಸಭೆಯು ಇಂದು ಅಧ್ಯಕ್ಷರಾದ ಜಗನ್ನಾಥ ದೇವಾಡಿಗ ರವರ ಅಧ್ಯಕ್ಷತೆಯಲ್ಲಿ ಮಂಜುಶ್ರೀ ಭಜನಾ ಮಂದಿರದಲ್ಲಿ ಜರುಗಿತು.2023-24 ಹಾಗೂ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ರವಿಕುಮಾರ್ ಕೆ ವೈ, ಗೌರವಾಧ್ಯಕ್ಷರಾಗಿ ಅನಿಲ್ ಹೆಗ್ಡೆ ಕೇದಗೆವನ, ಉಪಾಧ್ಯಕ್ಷರಾಗಿ ಹರೀಶ್ ಆಚಾರ್ಯ, ಕಾರ್ಯದರ್ಶಿಯಾಗಿ ತನಿಯಪ್ಪ ರಾಣ್ಯ, ಕೋಶಾಧಿಕಾರಿಯಾಗಿ ಜಯಪ್ರಸಾದ್ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಕುಲಾಲ್ ಪದಾಧಿಕಾರಿಗಳಾಗಿ ಆಯ್ಕೆಯಾದರು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲ ದೇವಾಡಿಗ, ನಿರಂಜನ ಸಾಲಿಯಾನ್, ಲಕ್ಷ್ಮಿ, ವರದರಾಜ ಕುಲಾಲ್, ಧರ್ನಪ್ಪ ಪೂಜಾರಿ, ಸತೀಶ್ ಕೇರಿಯರ್, ಸತೀಶ್ ಪೂಜಾರಿ, ತಿಮ್ಮಪ್ಪ ಪೊಸಲಾಯಿ, ಧನಂಜಯ ಕುಲಾಲ್, ಸಂಜೀವ ಪೂಜಾರಿ ಆಯ್ಕೆಯಾಗಿರುತ್ತಾರೆ.
ಕಾರ್ಯದರ್ಶಿ ಪದ್ಮನಾಭ ಬೀಯದಡಿ 2022-23 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.ಕೋಶಾಧಿಕಾರಿ ಆನಂದ.ಎನ್ 2022-23 ನೇ ಸಾಲಿನ ಲೆಕ್ಕಪತ್ರ ಆಡಿಟ್ ವರದಿ ಮಂಡಿಸಿದರು.
ಅಧ್ಯಕ್ಷರಾದ ಜಗನ್ನಾಥ ದೇವಾಡಿಗ ಮಾತನಾಡಿ ಕಳೆದ ಎರಡು ವರ್ಷಗಳಿಂದ ಮಂಜುಶ್ರೀ ಭಜನಾ ಮಂದಿರದಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕಿರುವುದು ಶ್ರೀ ದೇವರ ದಯೆ, ನಿಸ್ವಾರ್ಥದಿಂದ ಸೇವೆ ಮಾಡಲು ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೆ, ಕುಕ್ಕೇಡಿ ನಿಟ್ಟಡೆಯ ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದರು.ಗೌರವಾಧ್ಯಕ್ಷರಾದ ಕೆ ವೈ ಈಶ್ವರ ಭಟ್ ರವರು ಶುಭ ಹಾರೈಸಿದರು.
ಮಾ.ನಿತೇಶ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಭರತ್ ರಾಜ್ ಅಮೈ ಸ್ವಾಗತಿಸಿ ನಿರೂಪಿಸಿದರು.ಸಂತೋಷ್ ಕುಲಾಲ್ ವಂದಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.