ಬೆಳಾಲು: ಕಾಣೆಯಾಗಿದ್ದ ಅತ್ರಿಜಾಲು ತಮ್ಮಯ ಗೌಡರ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆ

0

ಬೆಳಾಲು: ಬೆಳಾಲು ಗ್ರಾಮದ ಮಾಯಾ ಅತ್ರಿಜಾಲು ಮನೆಯ ನಿವಾಸಿ ದಿ.ಗುರುವ ಗೌಡರ ಮಗ ತಮ್ಮಯ ಗೌಡ (42ವರ್ಷ) ರವರು ಜು.12 ರಂದು ಕಾಣೆಯಾಗಿದ್ದರು.

ಇವರ ಮೃತದೇಹ ಬಾವಿಯಲ್ಲಿ ಜು.13 ರಂದು ಪತ್ತೆಯಾಗಿದೆ.

ಮನೆಯಲ್ಲಿ ಇವರು ಒಬ್ಬರೇ ಇದ್ದು ಪತ್ನಿ ಇಬ್ಬರು ಮಕ್ಕಳು ತವರು ಮನೆಗೆ ಹೋಗಿದ್ದರು.

ಮನೆಯ ಸಮೀಪದ ಕೆರೆಯ ಬಳಿ ಟಾರ್ಚ್ ಲೈಟ್ ಸಿಕ್ಕಿದ್ದು ಸಂಶಯದಿಂದ ಆಳದ ಕೆರೆಯಲ್ಲಿ ಹುಡುಕಲು ಶೌರ್ಯ ವಿಪತ್ತು ತಂಡದ ಸದಸ್ಯರು ಊರವರು ಸಹಕರಿಸಿದರು.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರು ಪತ್ನಿ, ಒಂದು ಗಂಡು ಒಂದು ಹೆಣ್ಣು ಮಕ್ಕಳು, ತಾಯಿ, ಸಹೋದರರು, ಸಹೋದರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here