ಬಿಲ್ಲು ಇಲ್ಲದೆ ಅಡಿಕೆ ಸಾಗಾಟ-ವಾಹನ ವಶಕ್ಕೆ- ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ಬಿತ್ತು ದಂಡ

0

ಬೆಳ್ತಂಗಡಿ: ಸುಲಿದ ಒಣ ಅಡಕೆಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಬಿಲ್ಲು ಇಲ್ಲದೆ ಸಾಗಾಟ ಮಾಡುತ್ತಿದ್ದಾಗ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ತಂಡ ತಪಾಸಣೆ ವೇಳೆ ವಾಹನವನ್ನು ಪತ್ತೆ ಹಚ್ಚಿ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿ ಅಡಕೆ ಮತ್ತು ವಾಹನಕ್ಕೆ ದಂಡ ವಿಧಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗ ಜುಲೈ 12 ರಂದು ಬೆಳಗ್ಗೆ 11 ಗಂಟೆಗೆ ಮುಂಡಾಜೆ ಗ್ರಾಮದ ಪರಶುರಾಮ ರಾಮ ದೇವಸ್ಥಾನದ ಕ್ರಾಸ್ ಬಳಿ KA18C8521 ಸಂಖ್ಯೆಯ ಅಶೋಕ್ ಲೈಲಾಂಡ್ ಬಡಾದೋಸ್ತ್ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರೊಳಗೆ ಸುಲಿದ ಒಣ ಅಡಿಕೆ ಇದ್ದು ಇದರ ಚಾಲಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಇದ್ದಾ ನಗರದ 15 ನೇ ವಾರ್ಡಿನ ಅನ್ವರ್ ಪಾಷಾ ಅವರ ಮಗ ಶಾಬೀರ್ ವಿಚಾರಿಸಿದಾಗ ಸುಳ್ಯದ ಅಡಕೆ ಅಂಗಡಿಯಿಂದ ಪಡೆದುಕೊಂಡು ಕಡೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.ಇದಕ್ಕೆ ಸಂಬಂಧಿಸಿದ ಬಿಲ್ಲು / ದಾಖಲಾತಿ ಕೇಳಿದಾಗ ಬಿರೂರು ಅಜ್ಜಂಪುರ ರಸ್ತೆಯಲ್ಲಿರುವ ನಿದಾ ಟ್ರೇಡರ್ಸ್ ಸಂಬಂಧಿಸಿದ ಚೀಟಿಗಳನ್ನು ಸಲ್ಲಿಸಿದ್ದಾರೆ.ಬೇರೆ ಯಾವುದೇ ಬಿಲ್ಲುಗಳಿಲ್ಲ ಎಂದು ತಿಳಿಸಿದ್ದಾರೆ. ವಾಹನ, ಅಡಿಕೆ ಹಾಗೂ ಚಾಲಕನನ್ನು ಧರ್ಮಸ್ಥಳ ಪೊಲೀಸ್ ಠಾಣಾ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಜಾರಿ, ಪಶ್ಚಿಮ ವಲಯ ಮಂಗಳೂರು ವರದಿ ನೀಡಿದ್ದು ಅದರಂತೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ 81,900 ರೂಪಾಯಿ ದಂಡ ವಿಧಿಸಲಾಯಿತು.
ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ, ಸಿಬ್ಬಂದಿ ಶಶಿಧರ್ ಹಾಗೂ ವಾಹನ ಚಾಲಕ ಲೋಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here