ಮಡಂತ್ಯಾರು: ಬಸವನಗುಡಿ ಒಕ್ಕೂಟದ ವತಿಯಿಂದ ಗ್ರಾಮ ಸುಭಿಕ್ಷೆ ಕಾರ್ಯಕ್ರಮ

0

ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ಮಡಂತ್ಯಾರು ವಲಯದ ಬಸವನಗುಡಿ ಒಕ್ಕೂಟದ ವತಿಯಿಂದ, ಬಸವನಗುಡಿ ಬಸವೇಶ್ವರ ದೇವಸ್ಥಾನದಲ್ಲಿ ಗ್ರಾಮ ಸುಭಿಕ್ಷೆ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ವಲಯ ಜನಜಾಗೃತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ದೇವಸ್ಥಾನದ ಅಡಳಿತ ಮುಖ್ಯಸ್ಥ ಪ್ರಶಾಂತ್ ನಮ್ಮ ಬಂಟ್ವಾಳ, ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ, ಮೇಲ್ವಿಚಾರಕ ವಸಂತ ಕುಮಾರ್, ಸೇವಾಪ್ರತಿನಿಧಿ ಭಾರತಿ, ದೇವಸ್ಥಾನದ ಪ್ರಧಾನ ಅರ್ಚಕರು, ದೇವಸ್ಥಾನ ಆಡಳಿತ ಸಮಿತಿಯವರು, ಸಂಘದ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here