ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆ

0

ಉಜಿರೆ: ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆಯು ಶಾಲಾ ಸಂಚಾಲಕರಾದ ವಂ.ಫಾ.ಜೇಮ್ಸ್ ಡಿ’ಸೋಜ ರವರ ಅಧಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು.

ಶಿಕ್ಷಕ ಶಿಕ್ಷಕಿಯರ ಪ್ರಾರ್ಥನೆಯ ಬಳಿಕ ಶ್ರೀ ರವಿಕುಮಾರ್ ಎಲ್ಲರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿರುವ ಮಹನೀಯರ ಜೊತೆಗೂಡಿ ಸಂಚಾಲಕರು ದೀಪ ಪ್ರಜ್ವಲನಗೊಳಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತದನಂತರ ಶಾಲಾ ಪ್ರಾಂಶುಪಾಲರಾದ ವಂ.ಫಾ.ವಿಜಯ್ ಲೋಬೋರವರು ಪ್ರಾಸ್ತವಿಕ ಮಾತಿನ ಮೂಲಕ ಶಾಲೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

ಮುಂದಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲಾ ಮಟ್ಟದಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಕುಮಾರಿ ಇಂಚರ, ರುಬಾ ಫಾತಿಮಾ ಹಾಗೂ ವಂಶಿ ಇವರನ್ನು ಗೌರವಿಸಿ ಅವರ ಹೆತ್ತವರ ಜೊತೆ ಅಭಿನಂದಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವಿವೇಕಾನಂದ ಕಾಲೇಜ್ ಪುತ್ತೂರು ಇಲ್ಲಿಯ ನಿವೃತ್ತ ಪ್ರಾಂಶುಪಾಲರಾದ ಡಾ.ಮಾಧವ್ ಭಟ್ ಇವರನ್ನು ಗೌರವಿಸಲಾಯಿತು ಹಾಗೂ ಮುಂದೆ ಪಾಲಕರಿಗೆ ದಿಕ್ಸೂಚಿ ಭಾಷಣವನ್ನು ನೀಡಿ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಸಂಚಾಲಕರಾದ ವಂ.ಫಾ.ಜೇಮ್ಸ್ ಡಿ’ಸೋಜರವರು ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಪಾಲಕರ ಸಹಕಾರ ಕೋರಿ ಶುಭ ಹಾರೈಸಿದರು.

ತದನಂತರ ಶಿಕ್ಷಕ ರಕ್ಷಕ ಸಂಘಕ್ಕೆ ಪ್ರತಿ ತರಗತಿಯಿಂದ ಸದಸ್ಯರನ್ನು ನೇಮಿಸಲಾಯಿತು ಹಾಗೂ ಡಾ.ಪ್ರಶಾಂತ್ ಇವರನ್ನು ಸಂಘದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಹೇಮಾಲತಾರವರ ಧನ್ಯವಾದ ಸಮರ್ಪಣೆಯ ನಂತರ ರಾಷ್ಟಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಶ್ರೀ ಪ್ರಭಾಕರ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here