ಸೋಮಂತಡ್ಕ: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ 22ನೇ ನೂತನ ಸೋಮಂತಡ್ಕ ಶಾಖೆಯ ಉದ್ಘಾಟನಾ ಸಮಾರಂಭ ಭಾನುವಾರ ಸೋಮಂತಡ್ಕದ ಡಿಸೋಜಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಎಂಎಲ್ಸಿ ಹರೀಶ್ ಕುಮಾರ್ ಹಲವಾರು ಸಾಮಾಜಿಕ ಅಭಿವೃದ್ಧಿಯ ಧ್ಯೇಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ವೆಂಕಟರಮಣ ಕ್ರೆಡಿಟ್ ಆಪರೇಟಿವ್ ಸೊಸೈಟಿ ಮಾದರಿ ಮತ್ತು ಆದರ್ಶ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ್ ಮಾತನಾಡಿ “25 ಗಳ ಹಿಂದೆ ಆರಂಭವಾದ ಸಂಘ 22ನೇ ಶಾಖೆಯನ್ನು ಇದೀಗ ತೆರೆದಿದ್ದು,ರಜತ ವರ್ಷದಲ್ಲಿ ಇದನ್ನು 25ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ರಾಜ್ಯಾದ್ಯಂತ ಸಂಘಕ್ಕೆ 17,034 ಸದಸ್ಯರಿದ್ದು ಪ್ರಗತಿಪಥದಲ್ಲಿ ಸಂಘ ಮುಂದುವರೆದಿದೆ” ಎಂದರು.
ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಹಪೋಷಕರಾದ ಲೋಕೇಶ್ವರಿ ವಿನಯಚಂದ್ರ,ಮರೈನ್ ನ ನಿವೃತ ಮುಖ್ಯ ಅಭಿಯಂತರ ಡಿ.ಯಂ.ಗೌಡ,ಮುಂಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರಂಜಿನಿ ಆರ್, ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಪಿ ತಿಮ್ಮಪ್ಪ ಗೌಡ ಬೆಳಾಲು,ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ.ಚಂದ್ರಕಾಂತ್,ಡಿಸೋಜಾ ಕಾಂಪ್ಲೇಕ್ಸ್ ಮಾಲಕ ಹೆನ್ರಿ ಡಿಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ಕ್ರಡಿಟ್ ಕೋ ಅಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ,ನಿರ್ದೇಶಕರಾದ ಜಾಕೆ ಸದಾನಂದ,ನಿತ್ಯಾನಂದ ಮುಂಡೋಡಿ,ಎ.ವಿ ತೀರ್ಥ ರಾಮ,ಚಂದ್ರಾ ಕೋಲ್ಚಾರ್,ಕೆ.ಸಿ ನಾರಾಯಣ ಗೌಡ,ಕೆ.ಸಿ ಸದಾನಂದ,ಪಿ.ಎಸ್. ಗಂಗಾಧರ,ದಿನೇಶ್ ಮಡಪ್ಪಾಡಿ,ದಾಮೋದರ ಎನ್.ಎಸ್,ಜಯಲಲಿತಾ ಕೆ.ಎಸ್,ನಳಿನಿ ಸೂರಯ್ಯ,ಲತಾ ಎಸ್. ಮಾವಜಿ,ಹೇಮಚಂದ್ರ ಐ.ಕೆ,ಶೈಲೇಶ್ ಅಂಬೆಕಲ್ಲು,ನವೀನ್ ಕುಮಾರ್ ಜೆ.ವಿ ಹಾಗೂ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕೆ.ಟಿ ವಿಶ್ವನಾಥ, ಬ್ರಾಂಚ್ ಮ್ಯಾನೇಜರ್ ಯೋಗೀಶ್ ಹಾಗೂ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಗ್ರಾಹಕರಿಗೆ ಪ್ರಥಮ ಪಾಲು ಪತ್ರ,ಪ್ರಥಮ ಠೇವಣಿ ಪತ್ರ,ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡಲಾಯಿತು.
ಶಾಸಕ ಹರೀಶ್ ಪೂಂಜ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಶ್ರೀ ವೆಂಕಟರಮಣ ಕೋ- ಆಪರೇಟಿವ್ ಸೊಸೈಟಿ ಐದನೇ ಶಾಖೆ ಬೆಳ್ತಂಗಡಿಯಲ್ಲಿ ಆರಂಭವಾಗಿರುವುದು ಇಲ್ಲಿನ ಆರ್ಥಿಕ ವ್ಯವಹಾರ ಸದೃಢವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.ಸಹಕಾರ ಕ್ಷೇತ್ರ ಗ್ರಾಹಕರಿಗೆ ತ್ವರಿತ ಸ್ಪಂದನೆ ನೀಡುವುದರ ಜತೆ ಹಣಕಾಸು ವ್ಯವಹಾರಗಳಿಗೆ ದಾಖಲೆಗಳಿಗಿಂತ ವಿಶ್ವಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಸಹಕಾರಿ ಕ್ಷೇತ್ರವು ಜನಸಾಮಾನ್ಯರಿಗೆ, ರೈತರ ಅನುಕೂಲಕ್ಕೆ ಉತ್ತಮ ಯೋಜನೆಗಳನ್ನು ರೂಪಿಸುತ್ತಾ ಆರ್ಥಿಕ ಸಂಕಷ್ಟಗಳನ್ನು ನಿವಾರಿಸುತ್ತಿದೆ ಎಂದು ಹೇಳಿದರು.