ಕೋವಿಡ್ ನಲ್ಲಿ ಹೆತ್ತವರನ್ನು ಕಳೆದುಕೊಂಡವರ ಮಕ್ಕಳಿಗೆ ಶಿಕ್ಷಣಕ್ಕಾಗಿ ಶುಲ್ಕ ವಿತರಣೆ

0

ಬೆಳ್ತಂಗಡಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗು ಅಕ್ಸಲರೇಟ್ ಇಂಡಿಯಾ ಫೌಂಡೆಶನ್ ಟ್ರಸ್ಟ್, ಸುಪ್ರಜಿತ್ ಫೌಂಡೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊವಿಡ್ ನಿಂದ ಏಕಪೋಷಕ ಮತ್ತು ದೀಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಶಾಲಾ ಶುಲ್ಕವನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ 1ನೇ ತರಗತಿ ಯಿಂದ 10 ನೇ ತರಗತಿವರೆಗೆ ಒದುತ್ತಿರುವ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ವಿಠ್ಠಲ್ ದಾಸ್ ಕಾಮತ್ ರವರು ಮಾತನಾಡುತ್ತಾ, ನಮ್ಮ ಸಂಸ್ಥೆಯು ಕಳೆದ ಐದು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೋವಿಡ್ ಮಹಾಮಾರಿ ನಂತರ ನಾವು ಮುಖ್ಯವಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಮನಹರಿಸಿದ್ದೇವೆ, ಅದರ ಸಲುವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ನೀಡುತ್ತಿದ್ದೇವೆ. ನೀವು ಎಲ್ಲಿಯವರೆಗೂ ವಿದ್ಯಾಭ್ಯಾಸವನ್ನು ಮಾಡುತ್ತಿರೋ ಅಲ್ಲಿಯವರೆಗೆ ನಮ್ಮ ಸಂಸ್ಥೆಯು ಸಹಾಯ ಮಾಡುತ್ತದೆ, ಆದ್ದರಿಂದ ಎಲ್ಲಾ ಮಕ್ಕಳು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದು ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಳ್ಳಬೇಕೆಂಬುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನಾವು ನೀಡುತ್ತಿರುವ ಶಾಲಾ ಶುಲ್ಕವು ಹಲವಾರು ದಾನಿಗಳ ಹಣವಾಗಿದ್ದು ಎಲ್ಲರೂ ಸಹಾಯಧನವನ್ನು ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಬೇಕು ಎಂದರು.

ನಂತರ ಸುಪ್ರಜಿತ್ ಫೌಂಡೇಶನ್ ಸಂಯೋಜಕರಾದ ರವಿಕುಮಾರ್ ರವರು ಮಾತನಾಡಿ, ಸುಪ್ರಜಿತ್ ಫೌಂಡೇಶನ್ ಸಂಸ್ಥಾಪಕರಾದ ಕೆ ಅಜಿತ್ ಕುಮಾರ್ ರೈ ಮತ್ತು ಕಾರ್ಯದರ್ಶಿಗಳಾದ ಭಾರ್ಗವಿ ರವರು ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಶಾಲಾ ಶುಲ್ಕವನ್ನು ವಿತರಿಸಲಾಗುತ್ತಿದೆ. ಈ ಸಹಾಯಧನವು ನಮ್ಮ ಕಂಪನಿಯ ಸೋಶಿಯಲ್ ಕಾರ್ಪೊರೇಟ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮದಡಿ ವಿತರಿಸಲಾಗುತ್ತಿದ್ದು ಅದನ್ನು ಬೇರೆ ಕಾರ್ಯಕ್ಕೆ ವ್ಯಯ ಮಾಡದೆ ವಿದ್ಯಾಭ್ಯಾಸಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕುಮಾರ್ ಶೆಟ್ಟಿ ಗಾರ್ , ಮತ್ತೊಬ್ಬ ಅಧಿಕಾರಿ ವಝೀರ್ ಅಹಮದ್, ಸಿಸ್ಟರ್ ದುಲ್ಸಿನ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಆಕ್ಸಲರೇಟ್ ಇಂಡಿಯಾ ಫೌಂಡೇಶನ್ ಸಂಸ್ಥೆಯ ಮಾರ್ಗದರ್ಶಕರಾದ ಮಧುಸೂದನ್, ಚೇತನ್, ಗಣೇಶ್ ಭಟ್ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here