

ಶಿರ್ಲಾಲು: ಶಿರ್ಲಾಲು ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷ ತಾರಾನಾಥ ಗೌಡ ರವರ ಅಧ್ಯಕ್ಷತೆಯಲ್ಲಿ ಜುಲೈ.7ರಂದು ನಡೆಯಿತು.

ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ವಿದ್ಯಾ ಪಿ.ಡಿ. ಅವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು.ಶಿರ್ಲಾಲುವಿನಲ್ಲಿರುವ ಗೋಮಾಳ ಜಾಗವನ್ನು ಕಂದಾಯ ಇಲಾಖೆ ತನ್ನ ಸುಪರ್ದಿಗೆ ಪಡೆಯಬೇಕೆಂದು ಗ್ರಾಮಸ್ಥರ ಒತ್ತಾಯ ಮಾಡಿದರು.ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಹಲವಾರು ಚರ್ಚೆಗಳು ನಡೆದವು.ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಜ್ಯೋತಿ ಪೂಜಾರಿ,ಮಾಧವ,ಮಮತಾ ಜೈನ್,ಸೋಮನಾಥ ಬಂಗೇರ,ಗೀತಾ,ಕೊರಗಪ್ಪ,ಸುಶೀಲ,ಪ್ರಕಾಶ್ ಹೆಗ್ಡೆ,ಉಷಾ ಎಂ. ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಸ್ವಾಗತಿಸಿದರು.ಕಾರ್ಯರ್ಶಿ ನೇಮಮ್ಮ ಅನುಪಾಲನಾ ವರದಿ ಸಭೆಯ ಮುಂದಿಟ್ಟರು.
ಪಂಚಾಯತ್ ನ ಪವಿತಾ, ಸರೋಜಿನಿ, ಸುಪ್ರಿಯಾ, ಹರೀಶ್, ದಿನೇಶ, ವಿಶ್ವನಾಥ ಸಹಕರಿಸಿದರು.
ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮಸ್ಥರು ಉಪಸ್ಥಿತರಿದ್ದರು.