ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ ಇದರ ವತಿಯಿಂದ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಪುಂಜಾಲಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರ ಶರತ್ ಕುಮಾರ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಮಾತನಾಡಿ, ಮದ್ಯಪಾನ ಹಾಗೂ ಮಾದಕ ವಸ್ತು ಗಳು ಮನುಷ್ಯನಿಗೆ ದೊಡ್ಡ ರೋಗವಾಗಿದೆ.ಇದರಿಂದ ಎಷ್ಟೋ ಅಪಘಾತ ಆತ್ಮಹತ್ಯೆ ಮೊದಲಾದ ಘಟನೆಗಳು ಮಧ್ಯಪಾನದಿಂದ ಹೆಚ್ಚಾಗಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಈ ಕಡೆಗೆ ಗಮನ ಹರಿಸದೆ ಕೇವಲ ಓದುವ ಕಡೆ ಗಮನ ಹರಿಸಿ ಹೆತ್ತವರ ಕನಸನ್ನು ನನಸು ಮಾಡಬೇಕು. ಓದುವ ವಯಸ್ಸಿನಲ್ಲಿ ಯಾರೊಬ್ಬರೂ ದಾರಿತಪ್ಪಬಾರದು. ಗುಟ್ಕಾ ಧೂಮಪಾನಗಳಿಂದ ಯುವಜನತೆಯ ಜೀವನ ಹಾಳಾಗುತ್ತದೆ. ಸಹವಾಸ ದೋಷ ಆಕಸ್ಮಿಕ ಆಕರ್ಷಣೆಗಳ ಕಾರಣ ದುಶ್ಯಟ ಒಮ್ಮೆ ಆರಂಭವಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಇದರಿಂದ ವೈಯಕ್ತಿಕ ಜೀವನದ ಜೊತೆ ಜೊತೆಯಲಿ ಸಮಾಜದ ಸ್ವಾಸ್ಥ್ಯ ಸಹ ಹಾಳಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಪಿಸಿಕೊಂಡು ಉತ್ತಮ ಸಮಾಜ ಕಟ್ಟುವ ಕಾರ್ಯಕ್ರಮಕ್ಕೆ ದೃಢ ಸಂಕಲ್ಪ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಯೋ.ಜಿಲ್ಲಾ ನಿರ್ದೇಶಕರ ಮಹಾಬಲ ಕುಲಾಲ್, ಜನಜಾಗೃತಿ ವಲಯಾಧ್ಯಕ್ಷ ಪದ್ಮನಾಭ ಶಾಲಿಯನ್ ಹಾಗೂ ಯೋಜನಾಧಿಕಾರಿ ದಯಾನಂದ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.