ಉರುವಾಲು ನೆಕ್ಕಿಲು ನಿವಾಸಿ ಮುಹಮ್ಮದ್ ರಾಝಿಖ್ ದುಬೈನಲ್ಲಿ ಸಾವು

0

ಉರುವಾಲು ಇಲ್ಲಿಯ ನೆಕ್ಕಿಲು ನಿವಾಸಿ ಮುಂಡ್ರೊಟ್ಟು ದಾವೂದ್ ಎಂಬವರ ಪುತ್ರ ಮುಹಮ್ಮದ್ ರಾಝಿಖ್ ಎಂಬವರು ಜು.5 ರಂದು ದುಬೈನಲ್ಲಿ ಹೋಟೆಲ್ ರೂಮಿನಲ್ಲಿ ಮಲಗಿದ್ದವರು ನಿಗದಿತ ಸಮಯದಲ್ಲಿ ಇವರ ಚಲನವಲನ ಕಂಡು ಬಾರದ ಕಾರಣ ಹೋಟೆಲ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಮರಣಹೊಂದಿರುವುದು ತಿಳಿದು ಬಂದಿದೆ ಎಂದು ಗೊತ್ತಾಗಿದೆ.

ಇವರು ಇತ್ತೀಚೆಗಷ್ಟೇ ಮದುವೆಯಾಗಿದ್ದು, ಸಣ್ಣದೊಂದು ನಾಲ್ಕು ತಿಂಗಳ ಗಂಡು ಮಗುವಿರುತ್ತದೆ.
ಇವರು ತಂದೆ ತಾಯಿ ನಾಲ್ಕು ಜನ ಸಹೋದರರು ನಾಲ್ಕು ಸಹೋದರಿಯರು ಸೇರಿದಂತೆ ಬಂದು ಮಿತ್ರಾದಿಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here