


ಉಜಿರೆ: ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ, ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್ವೈಎಸ್) ಉಜಿರೆ ಯುನಿಟ್ ಹಾಗೂ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವವು ಜು.04ರಂದು ಮುಹಿಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಉಜಿರೆ ವಠಾರದಲ್ಲಿ ನಡೆಯಿತು.



ಉಪವಲಯ ಅರಣ್ಯಾಧಿಕಾರಿಗಳಾದ ಹರಿಪ್ರಸಾದ್, ರವೀಂದ್ರ ಅಂಕಲಾಡಿ, ಅರಣ್ಯ ರಕ್ಷಕರಾದ ಸಂತೋಷ್, ಅರಣ್ಯ ವೀಕ್ಷಕರಾದ ಸದಾನಂದ ವನಮಹೋತ್ಸವ ಹಾಗೂ ಗಿಡ ನೆಟ್ಟು ಬೆಳೆಸುವುದರ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಎಸ್ಎಂಎ ರಾಜ್ಯಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ಅಲ್ಹಾದಿ ಮದನಿ ತಂಙಳ್, ಉಜಿರೆ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರಾದ ಎಸ್.ಎಂ ಕೋಯ ತಂಙಳ್, ಎಸ್ವೈಎಸ್ ಉಜಿರೆ ಸರ್ಕಲ್ ಅಧ್ಯಕ್ಷರಾದ ಸಲೀಂ ಕನ್ಯಾಡಿ, ಎಸ್ಎಂಎ ಉಜಿರೆ ರೀಜಿನಲ್ ಅಧ್ಯಕ್ಷರಾದ ಮಯ್ಯದ್ದಿ ನಜಾತ್, ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್, ಎಸ್ವೈಎಸ್ ಉಜಿರೆ ಯುನಿಟ್ ಅಧ್ಯಕ್ಷರಾದ ಅಶ್ರಫ್ ಎಂ.ಹೆಚ್, ಎಸ್ಸೆಸ್ಸೆಫ್ ಉಜಿರೆ ಯುನಿಟ್ ಅಧ್ಯಕ್ಷರಾದ ಶಾಕಿರ್, ಮುಹಿಯುದ್ದೀನ್ ಜುಮಾ ಮಸ್ಜಿದ್ ಸದಸ್ಯರಾದ ಹನೀಫ್ ಯು.ಹೆಚ್, ಶರೀಫ್ ಎ.ಎಂ, ಮಹಮ್ಮದಾಲಿ, ಎಸ್ವೈಎಸ್ ಉಜಿರೆ ಯುನಿಟ್ ಕಾರ್ಯದರ್ಶಿ ಹಾರಿಸ್ ಎಟುಝಡ್, ಹಾತಿಬ್ ಮಾಸ್ಟರ್, ಅಬ್ದುಲ್ಲಾ ಉಜಿರೆ, ಮುಸ್ತಫಾ ಮೆಡಿಕಲ್, ಅಲ್-ಅಮೀನ್ ಯಂಗ್ಮೆನ್ಸ್ ಕಾರ್ಯದರ್ಶಿ ಫಝಲ್ ಕೋಯ, ಹುಸನಬ್ಬ ಬಿ.ಎಂ, ಉಸ್ಮಾನ್ ನ್ಯಾಷನಲ್ ಹಾಗೂ ಬದ್ರುಲ್ ಹುದಾ ಮದರಸ ಅಧ್ಯಾಪಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತಿತರಿದ್ದರು.









