

ಮಡಂತ್ಯಾರು: ರೋಟರಿ ಜಿಲ್ಲಾ ಕಾರ್ಯಕ್ರಮವಾದ ಪರಿಸರ ಸಂರಕ್ಷಣೆಯ ಅಂಗವಾಗಿ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮ ವನ್ನು ಧರ್ಮಸ್ಥಳ ಗ್ರಾಮಭಿವೃದ್ಧಿ ಯ ಸಹಯೋಗದಲ್ಲಿ ಪಾರೆಂಕಿ ಗ್ರಾಮದಲ್ಲಿ ಜುಲೈ 2 ರಂದು ನಡೆಸಲಾಯಿತು.

ಇನ್ನೂರಕ್ಕೂ ಅಧಿಕ ಗ್ರಾಮಾಭಿವೃದ್ದಿ ಯೋಜನೆ ಯ ಸದಸ್ಯರು ಹಾಗೂ ವಿಪತ್ತು ನಿರ್ವಹಣೆ ಯ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ನೂರಾರು ಗಿಡಗಳನ್ನು ಪಾರೆಂಕಿ ಗ್ರಾಮದಲ್ಲಿ ನೆಟ್ಟರು.
ವರ್ತಕರ ಸಂಘದ ಅಧ್ಯಕ್ಷರಾದ ಬಿ.ಜಯಂತ ಶೆಟ್ಟಿ ಜಾಗೃತಿ ಅಭಿಯಾನದ ಮಹತ್ವವನ್ನು ವಿವರಿಸಿದರು. ರೋ. ಟಿ.ವಿ ಶ್ರೀಧರ ರಾವ್ ಇವರು ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ್ ಮಡಂತ್ಯಾರ್ ನ ಅಧ್ಯಕ್ಷರಾದ ಶಶಿಪ್ರಭಾ, ಉಪಾಧ್ಯಕ್ಷರಾದ ಸಂಗೀತಾ ಶೆಟ್ಟಿ, ರೋಟರಿ ಕ್ಲಬ್ ನ ಅಧ್ಯಕ್ಷರಾದ ರೋ ಟಿ.ವಿ.ಶ್ರೀಧರ ರಾವ್ ಹಾಗೂ ಕಾರ್ಯದರ್ಶಿಗಳಾದ ನಿತ್ಯಾನಂದ ಬಿ. ಹಾಗೂ ಸದಸ್ಯರುಗಳಾದ ಜಯಂತ ಶೆಟ್ಟಿ ಬಿ., ಕಾಂತಪ್ಪ ಗೌಡ ಮುಡಾಯೂರು, ಮ್ಯಾಕ್ಸಿಂ ಆಲ್ಬುಕ್ಲರ್ಕ್ ಮತ್ತು ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸತೀಶ್ ಆಚಾರ್ಯ, ಮೇಲ್ವಿಚಾರಕರಾದ ವಸಂತ ಕುಮಾರ್ ಸೇವಾಪ್ರತಿನಿಧಿಗಳಾದ ಹರೀಣಾಕ್ಷಿ, ಶೋಭಾ, ಲೀಲಾವತಿ, ಪರಮೇಶ್ವರ ಹಾಗೂ ಯೋಜನೆಯ ಅಧಿಕಾರಿ ಗಳು, ಸೇವಾನಿರತರು ಮತ್ತು ಇತರ ಸದಸ್ಯರು ಭಾಗವಹಿಸಿದ್ದರು.