ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆ ಅಳದಂಗಡಿಯಲ್ಲಿ ಶಾಲಾ ಸಂಸತ್ತನ್ನು ಶಾಲಾ ಸಂಚಾಲಕರಾದ ಗೌರವಾನ್ವಿತ ವಂದನೀಯ ಫಾ. ಎಲಿಯಾಸ್ ಡಿಸೋಜ ಹಾಗೂ ಅತಿಥಿ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.
ಶಾಲಾ ನಾಯಕಿ ಲಿಯಾನ ಪಾಯ್ಸ್ 10ನೇ ತರಗತಿ, ಉಪನಾಯಕ – ಸುಶಾಂತ್ ಜೈನ್ 9ನೇ ತರಗತಿ , ಶಿಸ್ತು ಮಂತ್ರಿ – ಶಾನ್ ಹರ್ವಿನ್ ಫೆರ್ನಾಂಡಿಸ್ ,ಉಪಶಿಸ್ತು ಮಂತ್ರಿ – ಧ್ಯಾನ್ , ಆರೋಗ್ಯ ಮಂತ್ರಿ- ನಿಹಾರಿಕ , ಉಪ ಆರೋಗ್ಯ ಮಂತ್ರಿ – ಸನ್ನಿಧಿ ಜೈನ್ , ಕ್ರೀಡಾ ಮಂತ್ರಿ – ಸಾತ್ವಿಕ್ ಜೋಶಿ , ಉಪ ಕ್ರೀಡಾ ಮಂತ್ರಿ – ಡಿಯೋನ್ ಪ್ರಿನ್ಸ್ ಡಿಸೋಜ , ಸಾಂಸ್ಕೃತಿಕ ಮಂತ್ರಿ – ಅನ್ವಿಶಾ ಸಾನಿಕಾ ಪಾಯ್ಸ್, ಸ್ಪೀಕರ್ – ಹಾಗೂ ಕ್ಲಬ್ ಮತ್ತು ಹೌಸ್ ನಾಯಕರಿಗೆ ಮುಖ್ಯಶಿಕ್ಷಕಿಯವರು ಪ್ರತಿಜ್ಞಾ ವಿಧಿ ಬೋಧಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ವೇಣೂರು ಠಾಣಾ ಸಹಾಯಕ ಪೋಲಿಸ್ ಉಪ ನಿರೀಕ್ಷಕರಾದ ಶ್ರೀಯುತ ಲೋಕೇಶ್ ರವರು ನಿಯಮ ಪಾಲನೆಯ ಮಹತ್ವ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ ಶುಭ ಹಾರೈಸಿದರು ಶಾಲಾ ಸಂಚಾಲಕರಾದ ವಂ.ಫಾ. ಎಲಿಯಾಸ್ ಡಿ ಸೋಜ ಮಾತನಾಡಿ ನೂತನ ಶಾಲಾ ಸಂಸತ್ತಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಶೀಬಾ ಜೋಸೆಫ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಮಧುಸೂದನ ನಾಯಕ್ ,ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸ್ಟೀವನ್ ಪಾಯ್ಸ್ ಹಾಗು ವೇಣೂರು ಠಾಣಾ ಹೆಡ್ ಕಾನ್ಸ್ಟೇಬಲ್ ಸಂದೀಪ್ ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಹಶಿಕ್ಷಕಿ ವಿಶಾಲಾಕ್ಷಿರವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಸಿಸ್ಟರ್ ಫ್ರಾನ್ಸಿಸ್ ಮೇರಿ ಸ್ವಾಗತಿಸಿ ಸಹಶಿಕ್ಷಕಿ ಪ್ರೇಮ ವಂದಿಸಿದರು.