ಪುದುವೆಟ್ಟು: ಶ್ರೀ ಧ.ಮಂ.ಅ.ಹಿ.ಪ್ರಾ.ಶಾಲೆಯಲ್ಲಿ ಪೋಷಕ ವೃಂದದವರಿಂದ ಶ್ರಮದಾನ

0

ಪುದುವೆಟ್ಟು: ಜೂ.27ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕ ವೃಂದದವರಿಂದ ಶಾಲೆಯಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು.

ಹೆಚ್ಚಿನ ಸಂಖ್ಯೆಯಲ್ಲಿ ಪೋಷಕ ವೃಂದದವರು ಶ್ರಮದಾನಕ್ಕೆ ಆಗಮಿಸಿ ತೆಂಗಿನ ಸಸಿಗಳ ಬುಡವನ್ನು ಬಿಡಿಸಿ ಸೊಪ್ಪುಹಾಕಲಾಯಿತು.

ಶಾಲೆಯ ಅಕ್ಷರ ದಾಸೋಹ ಕೊಠಡಿ ಮತ್ತು ಶಾಲಾ ಶೌಚಾಲಯದ ಸುತ್ತ ಮುತ್ತ ಹುಲ್ಲನ್ನು ತೆಗೆಯಲಾಯಿತು.

ಸುಮಾರು 60ಕ್ಕೂ ಹೆಚ್ಚು ಪೋಷಕವೃಂದದವರು ಈ ಒಂದು ಶ್ರಮದಾನದಲ್ಲಿ ಭಾಗವಹಿಸಿ ಶ್ರಮದಾನವನ್ನು ಯಶಸ್ವಿಗೊಳಿಸಿದರು.

ಶಾಲೆಯ ಮುಖ್ಯ ಶಿಕ್ಷಕರಾದ ಶೀನಪ್ಪಗೌಡ ರವರ ನೇತೃತ್ವದಲ್ಲಿ ಶ್ರಮದಾನನವನ್ನು ಆಯೋಜನೆ ಮಾಡಲಾಯಿತು.

LEAVE A REPLY

Please enter your comment!
Please enter your name here