

ಕಲ್ಮಂಜ ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ಅಧ್ಯಕ್ಷ ಶ್ರೀಧರ ನಿಡಿಗಲ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ಜೂ.27ರಂದು ನಡೆಯಿತು.ಉಪಾಧ್ಯಕ್ಷೆ ವಿಮಲಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.ಶಿಕ್ಷಣ ಇಲಾಖೆಯ ಸಂಯೋಜಕ ಸಿದ್ಧಲಿಂಗ ಸ್ವಾಮಿ ನೋಡಲ್ ಅಧಿಕಾರಿಯಾಗಿದ್ದರು.
ಕಲ್ಮಂಜ ಗ್ರಾಮ ವ್ಯಾಪ್ತಿಯನ್ನು ಹೊಂದಿರುವ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಕಾಯಂ ವೈದ್ಯರಿಲ್ಲದ ಕಾರಣ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿಗೆ ಕಾಯಂ ವೈದ್ಯರನ್ನು ತಕ್ಷಣ ನೇಮಿಸಬೇಕು ಎಂಬ ಆಗ್ರಹ ಗ್ರಾಮಸ್ಥರಿಂದ ವ್ಯಕ್ತವಾಯಿತು.ಇನ್ನಿತರ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಗ್ರಾಮಸ್ಥರು ಚರ್ಚಿಸಿದರು.
ಗ್ರಾಮಸ್ಥರಾದ ಕೊಳ್ತಿಗೆ ನಾರಾಯಣಗೌಡ, ದಿನೇಶ್ ಗೌಡ, ರಾಘವ ಕಲ್ಮಂಜ, ಮುಂಡಪ್ಪ, ಮೋನಪ್ಪ ಮತ್ತಿತರರು ಅಧಿಕಾರಿಗಳ ಬಳಿ ಚರ್ಚಿಸಿದರು.
ಪಿಡಿಒ ಇಮ್ತಿಯಾಜ್ ಸ್ವಾಗತಿಸಿದರು.ಸಿಬ್ಬಂದಿ ರಮೇಶ್ ಆಯ-ವ್ಯಯ ಮಂಡಿಸಿದರು. ಲತಾ ವಾರ್ಡ್ ಬೇಡಿಕೆಗಳ ಪಟ್ಟಿ ವಾಚಿಸಿದರು.