


ಬೆಳ್ತಂಗಡಿ: ಸಂತ ತೆರೇಸಾ ಆಂಗ್ಲ ಮಾಧ್ಯಮದ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭವು ಜೂ.೨೨ರಂದು ನಡೆಯಿತು.


ಶಾಲಾ ನಾಯಕಿ ಕು.ನಿಶಾ ಪ್ರತಿಜ್ಞಾ ವಿಧಿಯನ್ನು ಸ್ಪೀಕರ್ ಕು.ಪ್ರಾರ್ಥನಾರವರಿಂದ ಸ್ವೀಕರಿಸಿ, ಉಳಿದ ಸದಸ್ಯರಿಗೆ ಪ್ರತಿಜ್ಞೆಗೆ ಅವಕಾಶ ನೀಡಿದರು.
ಶಾಲಾ ಮುಖ್ಯೋಪಾಧ್ಯಯಿನಿ ವಂ.ಭಗಿನಿ ಲೀನಾ ಡಿಸೋಜಾ ಮಂತ್ರಿಮಂಡಲದ ಸರ್ವರಿಗೂ ಅವರ ಹುದ್ದೆಯ ನಾಮಫಲಕವನ್ನು ತೊಡಿಸಿದರು.ಪ್ರತಿಯೋರ್ವರು ತಮ್ಮ ದೀಪವನ್ನು ಮುಖ್ಯ ಶಿಕ್ಷಕರ ದೀಪದಿಂದ ಉರಿಸಿ, ಉರಿಯುವ ಜ್ವಾಲೆಯ ಸಾಕ್ಷಿಯಾಗಿ ಜವಾಬ್ದಾರಿಯನ್ನು ನೆರವೇರಿಸುವ ಭರವಸೆ ನೀಡಿದರು.ಕು.ಹೈಫಾ ಕಾರ್ಯಕ್ರಮ ನಿರೂಪಿಸಿದರು.ಆಂಗ್ಲ ಮಾಧ್ಯಮ ಸಂಸತ್ತಿನ ಮೇಲ್ವೀಚಾರಕರಾಗಿ ಶಿಕ್ಷಕಿ ಅಕ್ಷತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.


            





