ಮಡಂತ್ಯಾರು ವರ್ತಕ ಬಂಧು ಸಹಕಾರ ಸಂಘದ ಮಹಾಸಭೆ

0

ಮಡಂತ್ಯಾರು: ವರ್ತಕರಿಂದ ವರ್ತಕರಿಗಾಗಿ ವರ್ತಕರಿಗೋಸ್ಕರ ವರ್ತಕರೆ ಪ್ರವರ್ತಿಸಲ್ಪಡುವ ಮಡಂತ್ಯಾರು ವರ್ತಕ ಬಂಧು ಸಹಕಾರ ಸಂಘವು ಅಸ್ತಿತ್ವಕ್ಕೆ ಬಂದಿದ್ದು ಇದರ ಪ್ರಥಮ ವಾರ್ಷಿಕ ಮಹಾಸಭೆಯು ಮಡಂತ್ಯಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜೂ.21ರಂದು ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಜಯಂತ್ ಶೆಟ್ಟಿ ಬಿ ವಹಿಸಿದ್ದರು.ಈ ಸಬೆಯಲ್ಲಿ ನೂತನ ಆಡಳಿತ ಮಂಡಳಿ ಘೋಷಣೆಯನ್ನು ಕಂಡೆತ್ಯಾರು ಮೋನಪ್ಪ ಪೂಜಾರಿ ನಿರ್ವಹಿಸಿ ಶುಭ ಹಾರೈಸಿದರು.

ಮಹಾ ಸಭೆಯ ನೋಟೀಸು, ನೊಂದಾಣಿ ಪತ್ರ, ಉಪನಿಬಂಧನೆಗಳ ಅನುಮೋದನೆ, ಲೆಕ್ಕ ಪತ್ರ ಮಂಡನೆ ಮತ್ತು ಮಂಜೂರಾತಿ, 2023-24 ನೇ ಸಾಲಿನ ಬಜೆಟ್, ಲೆಕ್ಕ ಪರಿಶೋಧಕರ ಆಯ್ಕೆ ಓದಿ ಅನುಮತಿ ಪಡೆಯಲಾಯಿತು.ಜುಲೈ 9ರಂದು ನೂತನ ಸಂಘದ ಉದ್ಘಾಟನೆ ನೆರವೇರಿರಲಿದೆ ಎಂದು ಅಧ್ಯಕ್ಷರು ಘೋಷಿಸಿದರು.

LEAVE A REPLY

Please enter your comment!
Please enter your name here