




ಬೆಳ್ತಂಗಡಿ: ಗುರುವಾಯನಕೆರೆ ಪದ್ಮಯ್ಯ ಆಚಾರಿ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಡಬ ತಾಲೂಕು ಬೆಳಂದೂರು ಗ್ರಾಮದ ಕೈಮನೆ ನಿವಾಸಿ ನವೀನ್ ಕೆ.ಆರ್. ಎಂಬವರ ಪತ್ನಿ ಕವನಾ (25ವ) ಮಗ ರಕ್ಷಣ್ (4ವ) ಜೂನ್ 6ರಂದು ಕಾಣೆಯಾಗಿದ್ದಾಾರೆ.
ಜೂನ್ 5ರಂದು ತನ್ನ ಬಾಡಿಗೆ ಮನೆಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದು, ಜೂನ್ 6ರಂದು ಬೆಳಗ್ಗೆ ನವೀನ್ ನೋಡಿದಾಗ ಪತ್ನಿಿ ಹಾಗೂ ಮಗು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಕವನಾ ಅವರು 2022ರಲ್ಲಿಯೂ ಕಾಣೆಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪರಿಚಯಸ್ಥರೊಂದಿಗೆ ಹೋಗಿದ್ದ ಕವನಾ ಅವರನ್ನು ಪೊಲೀಸರು ಪತ್ತೆ ಮಾಡಿದ್ದರು.








