ಬೆಳ್ತಂಗಡಿ: ವಿದ್ಯಾಪ್ರೇಮಿ ಸಯ್ಯಿದ್ ಉಮ್ಮರ್ ಅಸ್ಸಖಾಫ್ ಮನ್‌ಶರ್ ತಂಙಳ್ ಅವರ ನೇತೃತ್ವದಲ್ಲಿ ಗೇರುಕಟ್ಟೆಯಲ್ಲಿ ಕಳೆದ 13 ವರ್ಷಗಳಿಂದ ಆರಂಭಗೊಂಡು ಮುಂದುವರಿಯುತ್ತಿರುವ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಹೊಸ ಸೇರ್ಪಡೆ ಎಂಬಂತೆ ಪ.ಪೂ ವಿಜ್ಞಾನ (ಸೈನ್ಸ್) ವಿಭಾಗ ಆರಂಭಿಸಲು ಸರಕಾರ ಅಧಿಕೃತ ಅನುಮೋದನೆ ನೀಡಿದೆ.
ಈಗಾಗಲೇ ಮನ್‌ಶರ್ ಅಕಾಡೆಮಿಗೆ 2022-23ರ ಶೈಕ್ಷಣಿಕ ಸಾಲಿನಲ್ಲಿ ಪ.ಪೂ ವಿಭಾಗ ತೆರೆದು ವಾಣಿಜ್ಯ ಮತ್ತು ಕಲಾ ವಿಭಾಗ ಪ್ರಾರಂಭಿಸಲು ಅನುಮೋದನೆ ದೊರತಿತ್ತು. ಇದೀಗ ಹೆಚ್ಚುವರಿಯಾಗಿ2023-24ರ ಶೈಕ್ಷಣಿಕ ಸಾಲಿಗೆ ವಿಜ್ಞಾನ (ಸೈನ್ಸ್) ವಿಭಾಗಕ್ಕೂ ಅನುಮೋದನೆ ಲಭಿಸದೆ. ಆ ನಿಟ್ಟಿನಲ್ಲಿ ದಾಖಲಾತಿ ಆರಂಭವಾಗಿದೆ.
ಸಂಸ್ಥೆಯಲ್ಲಿ ಈಗಾಗಲೇ ಸುಸಜ್ಜಿತ ಲ್ಯಾಬ್‌ನೊಂದಿಗೆ ಆಧುನಿಕ ಶೈಲಿಯ ಸ್ಮಾರ್ಟ್ ಕ್ಲಾಸ್ ಒಳಗೊಂಡು ಅನುಭವಿ ಹಾಗೂ ನುರಿತ ಅಧ್ಯಾಪಕ ವೃಂದ ತರಗತಿ ನಡೆಸುತ್ತಿದ್ದಾರೆ. ನೀಟ್ ಮತ್ತು ಸಿಇಟಿ ಯಂತಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರಿಸುವ ಗುರಿ ಕೂಡ ಹೊಂದಲಾಗಿದೆ.
ಗ್ರಾಮೀಣ ಭಾಗದ ಆಸಕ್ತ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಚೇರ್‌ಮ್ಯಾನ್ ಮತ್ತು ಮ್ಯಾನೇಜ್‌ಮೆಂಟ್ ಕೋರಿದೆ.
ಪ್ರಸ್ತುತ ಮನ್‌ಶರ್ ಪ್ರಿಸ್ಕೂಲ್, ಪ್ರೈಮರಿ ಸ್ಜೂಲ್, ಹೈಸ್ಕೂಲ್ , ಪಿ.ಯು. ಕಾಲೇಜು, ಬೆಳ್ತಂಗಡಿ ತಾಲೂಕಿನ ಏಕೈಕ ಪ್ಯಾರಾಮೆಡಿಕಲ್ ಕಾಲೇಜು , ಮನ್‌ಶರ್ ಅರೇಬಿಕ್ ಕಾಲೇಜು ಹಾಗು ಸ್ಕೂಲ್ ಆಫ್ ಹಿಫುಲುಲ್ ಖುರ್‌ಆನ್ ವಿಭಾಗಗಳನ್ನು ನಡೆಸಲಾಗುತ್ತಿದ್ದು, ಸರಿ ಸುಮಾರು ೭೦೦ ರಿಂದ ೭೫೦ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.