ಬಳಂಜ: ಗ್ರಾಮ ಸಭೆ- ಗ್ರಾಮಸಭೆಗೆ ಆಗಮಿಸಿದ ಅಧಿಕಾರಿಗಳು ಐಡಿ ಹಾಕದಕ್ಕೆ ಗ್ರಾಮಸ್ಥರ ತರಾಟೆ

0

ಬಳಂಜ: ಬಳಂಜ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷ ಹೇಮಂತ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ 20 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್ ನಡೆಸಿಕೊಟ್ಟರು.

ಗ್ರಾಮಸಭೆಯಲ್ಲಿ ಅಧಿಕಾರಿಗಳು ಐಡಿ ಹಾಕದೇ ಆಗಮಿಸಿದ್ದಕ್ಕೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಹಲವಾರು ಚರ್ಚೆಗಳು ನಡೆದವು. ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರು ತಿಳಿಸಿದರು‌.ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಸಿಗುವ ಸವಲತ್ತು ಹಾಗೂ ಯೋಜನೆಯ ಬಗ್ಗೆ ತಿಳಿಸಿದರು.

ಗ್ರಾಮ ಸಭೆಯಲ್ಲಿ ಪಂ.ಉಪಾಧ್ಯಕ್ಷೆ ಬೇಬಿ, ಸದಸ್ಯರುಗಳಾದ ಬಾಲಕೃಷ್ಣ ಪೂಜಾರಿ, ರವೀಂದ್ರ ಬಿ ಅಮೀನ್, ಯಶೋಧರ ಶೆಟ್ಟಿ, ಜಯ ಶೆಟ್ಟಿ, ನಿಜಾಮ್, ಸುಚಿತ್ರಾ ಪ್ರಶಾಂತ್, ಯಕ್ಷಿತಾ ದೇವಾಡಿಗ, ಪದ್ಮಾವತಿ,ಶೋಭಾ ಕುಲಾಲ್, ಪ್ರಸನ್ನ ಕುಮಾರಿ, ಲೀಲಾವತಿ,ಉಪಸ್ಥಿತರಿದ್ದರು.

ಪಿಡಿಒ ಶ್ರಿನೀವಾಸ್ ಸ್ವಾಗತಿಸಿದರು.

ಸಭೆಯಲ್ಲಿ ಗ್ರಾಮಸ್ಥರು, ಆರೋಗ್ಯ ಇಲಾಖೆಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here