ಮಚ್ಚಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

0

ಮಚ್ಚಿನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ ಮಡಂತ್ಯಾರು ವಲಯದ ಮಚ್ಚಿನ ಕಾರ್ಯ ಕ್ಷೇತ್ರದ ಹಿರಿಯ ಪ್ರಾಥಮಿಕ ಶಾಲೆ ಮಚ್ಚಿನ ಶಾಲೆಯಲ್ಲಿ ವಿಪತ್ತು ತಂಡದ ಸ್ವಯಂ ಸೇವಕರು ಎಲ್ಲರ ಸೇರಿ ಶ್ರಮದಾನದ ಮೂಲಕ ಶಾಲಾ ಕೈತೋಟ ನಿರ್ಮಾಣ ಮಾಡಿ ಬೆಂಡೆ, ಹೀರೆಕಾಯಿ, ಸಿಹಿ ಕುಂಬಳ ಕಾಯಿ ವಿವಿಧ ಜಾತಿಯ ತರಕಾರಿ ಬೀಜವನ್ನು ನಾಟಿ ಮಾಡಲಾಯಿತು.

ಹಾಗೆಯೇ, ಪರಿಸರ ಗಿಡ ನಾಟಿ ಕಾರ್ಯಕ್ರಮ ಆಯೋಜಿಸಿ ವಿವಿಧ ಜಾತಿಯ ಹಣ್ಣಿನ ಗಿಡ ನಾಟಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಾಧ್ಯಾಪಕರು ವಿಠ್ಠಲ್.ಬಿ ರವರು ಗಿಡ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು. ವಿಪತ್ತು ನಿರ್ವಹಣಾ ಘಟಕದ ತಾಲೂಕು ಸಮಿತಿಯ ಮಾಸ್ಟರ್ ಶ್ರೀಕಾಂತ್ ಪಟವರ್ದನ್ ಹಾಗೂ ಕ್ಯಾಪ್ಟನ್ ಸತೀಶ್ ವಲಯ ಮೇಲ್ವಿಚಾರಕರು, ವಸಂತ ಕುಮಾರ್ ಕೃಷಿ ಮೇಲ್ವಿಚಾರಕರು, ಕೃಷ್ಣ ಗೌಡ ಸೇವಾಪ್ರತಿನಿಧಿ, ಪರಮೇಶ್ವರ್, ಹೇಮಲತಾ ಹಾಗೂ ಎಲ್ಲ ಸ್ವಯಂ ಸೇವಕರು, ಒಕ್ಕೂಟದ ಸದಸ್ಯರು, ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here