ನ್ಯಾಯತರ್ಪು: ರಕ್ತೇಶ್ವರಿಪದವು ಜಿಲ್ಲಾ ಮಟ್ಟದ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಕೆ.ಎಸ್.ರವರಿಗೆ ಬಾಲ ವಿಕಾಸ ಸಮಿತಿ, ಮಕ್ಕಳ ಪೋಷಕರು ಮತ್ತು ಊರಿನ ವಿಧ್ಯಾಭಿಮಾನಿಗಳಿಂದ ವತಿಯಿಂದ ಸನ್ಮಾನಿಸಿ, ಗೌರವಿಸುವ ಕಾರ್ಯಕ್ರಮ ಜೂ.17 ರಂದು ಅಂಗನವಾಡಿ ಕೇಂದ್ರದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಂದನಾ ಶೆಟ್ಟಿ, ಭಾರತೀಯ ಭೂಸೇನೆ ನಿವೃತ್ತ ಸೈನಿಕ,ನಾಳ ವ್ಯವಸ್ಥಾಪನ ಸಮಿತಿ ಸದಸ್ಯ, ದಿನೇಶ್ ಕುಮಾರ್ ಕೆ,ಸನ್ಮಾನಿತರ ಪುತ್ರ ಭಾರತೀಯ ಭೂಸೇನೆ ಸೈನಿಕ ವಿಕ್ರಮ್ ಜೆ.ಎನ್, ಕಳಿಯ ಗ್ರಾಮ ಪಂಚಾಯತು ಸದಸ್ಯರಾದ ಮೋಹಿನಿ ಬಿ.ಗೌಡ, ವಿಜಯ ಗೌಡ ಕೆ.,ಕಳಿಯ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷರಾದ ಕೇಶವ ಪೂಜಾರಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಸಮಿತಿ ಅಧ್ಯಕ್ಷೆ ಕವಿತಾ, ಮುಖ್ಯ ಶಿಕ್ಷಕಿ ಚೈತ್ರಪ್ರಭಾ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುರೇಖಾ, ಅಂಗನವಾಡಿ ಸಹಾಯಕಿ ಸುನೀತಾ ಕೆ, ಸ್ಥಳೀಯ ಕ್ರೀಡಾ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಹೆಚ್, ನ್ಯಾಯತರ್ಪು ಒಕ್ಕೂಟದ ಜೊತೆ ಕಾರ್ಯದರ್ಶಿ ಜಯರಾಮ ಗೌಡ ಕೆ, ಹಿರಿಯರಾದ ಧರ್ಣಪ್ಪ ಗೌಡ ಹೆಚ್, ಮಕ್ಕಳ ಪೋಷಕರಾದ ಕುಶಾಲಪ್ಪ ಗೌಡ ಕೆ,ಮೋಹನ ಗೌಡ,ನಿವೃತ್ತ ಸಹಾಯಕಿ ಪೂವಮ್ಮ ಸ್ಥಳೀಯ ವಿವಿಧ ಸಂಘದ ಪದಾಧಿಕಾರಿಗಳು ಮಕ್ಕಳ ಪೋಷಕರು ಭಾಗವಹಿಸಿದರು.
ನ್ಯಾಯತರ್ಪು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಸ್ವಾಗತಿಸಿದರು. ನಾಳ ದೇವಸ್ಥಾನ ವ್ಯವಸ್ಥಾನ ಸಮಿತಿ ಸದಸ್ಯರಾದ ಉಮೇಶ್ ಕಾರ್ಯಕ್ರಮ ನಿರೂಪಿಸಿ,ಧನ್ಯವಾದವಿತ್ತರು.