

ಪುದುವೆಟ್ಟು: ಜೂ.16ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಗೆ ಸಂಬಂಧಪಟ್ಟ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ನೆರಿಯಾ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ ರವರು ವಹಿಸಿಕೊಂಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಯದ ಪ್ರದೀಪ್ ರವರು ಆಗಮಿಸಿ, ಶಾಲಾ ಮಕ್ಕಳಿಗೆ ಡೆಂಗ್ಯೂ ಮತ್ತು ಮಲೇರಿಯಾ ಜ್ವರವನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಬಗ್ಗೆ ಸುಧೀರ್ಘವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಪುದುವೆಟ್ಟು ಗ್ರಾಮದ ಮೇಲಿನಡ್ಕದ ಆರೋಗ್ಯ ಉಪಕೇಂದ್ರದ ಭಾರತಿಯವರು ಉಪಸ್ಥಿತರಿದ್ದು, ಸಾಂಕ್ರಾಮಿಕ ಜ್ವರದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮವನ್ನು ಶಾಲೆಯ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಪವನ್ ಕುಮಾರ್ ರವರು ಸ್ವಾಗತಿಸಿ, ಸುಜಾತ ಬಿ ರವರು ಧನ್ಯವಾದಗೈದರು.
ಶಾಲೆಯ ಎಲ್ಲ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.