ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಸಂಸತ್ತಿಗಾಗಿ ಚುನಾವಣೆ ನಡೆಸಲಾಯಿತು.
ಚುನಾವಣೆಯ ವಿವಿಧ ಹಂತಗಳಾದ ನಾಮಪತ್ರ ಸಲ್ಲಿಕೆ ನಾಮಪತ್ರ ಹಿಂಪಡೆಯುವಿಕೆ ನಾಮಪತ್ರ ಪರಿಶೀಲಿಸುವಿಕೆ ಇತ್ಯಾದಿಗಳು ಕ್ರಮ ಪ್ರಕಾರವಾಗಿ ನಡೆದು ಇಂದು ಚುನಾವಣೆಯನ್ನು ನಡೆಸಲಾಯಿತು.ಈ ಬಾರಿಯ ಮತದಾನಕ್ಕಾಗಿ ಇವಿಯಂ ಮತಯಂತ್ರ ಬಳಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಹಾಗೂ ಅದರ ವಿವಿಧ ಹಂತಗಳನ್ನು ತಿಳಿಯಲು ಈ ಮೂಲಕ ಸಹಾಯವಾಯಿತು.
ಶಾಲಾ ನಾಯಕನಾಗಿ 10ನೇ ತರಗತಿ ಜಸ್ವಿನ್, ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಭರತ್, ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಮೌಲ್ಯ, ಆಟೋಟ ಮುಖ್ಯಮಂತ್ರಿಯಾಗಿ 9ನೇ ತರಗತಿಯ ಚಿನ್ಮಯಿ ರೈ , ನೀರಾವರಿ ಮಂತ್ರಿಯಾಗಿ 10ನೇ ತರಗತಿಯ ಸಮನ್ವಿ, ಶೈಕ್ಷಣಿಕ ಮಂತ್ರಿಯಾಗಿ ಹಂಸಿನಿ ಭಿಡೆ, ಶಿಸ್ತುಪಾಲನಾ ಮಂತ್ರಿಯಾಗಿ 9ನೇ ತರಗತಿಯ ಅಂಜನ ರೋಸ್, ಆರೋಗ್ಯ ಮಂತ್ರಿಯಾಗಿ 9ನೇ ತರಗತಿಯ ಅದಿತಿ ಆಯ್ಕೆಯಾದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ವಿರೋಧ ಪಕ್ಷದ ವಿದ್ಯಾರ್ಥಿಗಳಿಗೆ ಆಡಳಿತ ಪಕ್ಷದ ಮೇಲೆ ಕಣ್ಗಾವಲಿಟ್ಟು ಶಾಲಾ ಯಶಸ್ಸಿಗೆ ಸಹಕರಿಸಲು ತಿಳಿಸಿದರು.ಶಾಲಾ ಶಿಕ್ಷಕರುಗಳು ಚುನಾವಣೆಗೆ ಸಹಕರಿಸಿದರು.