ಉಜಿರೆ: ವಿದ್ಯಾರ್ಥಿದೆಸೆಯಲ್ಲಿ ಬದುಕಿನ ಮೌಲ್ಯಗಳನ್ನು ಅರ್ಥೈಸುತ್ತಾ, ಎಲ್ಲಾ ರೀತಿಯ ಜೀವನ ಕೌಶಲ ಕಲೆಗಳನ್ನು ಕರಗತ ಮಾಡಿಕೊಂಡು ಸಂಪೂರ್ಣರಾಗುವತ್ತ ಸಂಕಲ್ಪ ಮಾಡಿಕೊಳ್ಳಬೇಕು.ಏನೇನು ಮಾಹಿತಿಗಳು ಸಿಗುವುದೋ ಅವೆಲ್ಲವನ್ನು ನೆನಪಿನ ಬುತ್ತಿಯಲ್ಲಿ ತುಂಬಬೇಕು.ಸಾಮಾನ್ಯ ಜ್ಞಾನ ಸಂಪಾದನೆ ಮೂಲಕ ನಮ್ಮ ಸುತ್ತ-ಮುತ್ತಲಿನ ಆಗು-ಹೋಗುಗಳ ಪರಿಚಯ,ಪ್ರಜ್ಞೆ ಇರಬೇಕು.ಉನ್ನತ ಧ್ಯೇಯದೊಂದಿಗೆ ಗುರಿಯತ್ತ ಸಾಗಬೇಕು.ಲೋಕ ಉದ್ಧಾರಕರಾಗುತ್ತೇವೋ, ಇಲ್ಲವೋ ಆದರೆ ಲೋಕ ಕಂಟಕರಾಗುವ ಚಟುವಟಿಕೆಯಲ್ಲಿ ಯಾವತ್ತೂ ತೊಡಗಿಸಿಕೊಳ್ಳಬೇಡಿ.ದೇಶ, ಭಾಷೆ ಕುರಿತು ಅಭಿಮಾನವಿರಲಿ ಎಂದು ನಿವೃತ್ತ ಉಪನ್ಯಾಸಕ ಗೋಪಾಲ ಪಟವರ್ಧನ್ ಹೇಳಿದರು.ಅವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ವ್ಯಕ್ತಿತ್ವ ವಿಕಸನ ಕಾರ್ಯಾಗಾರ’ದಲ್ಲಿ ಪಟುವರ್ಧನರು ವಿದ್ಯಾರ್ಥಿಗಳಿಗೆ ವಿವಿಧ ಮನರಂಜನೆ ಚಟುವಟಿಕೆಗಳ ಮೂಲಕ, ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಸುನೀಲ್ ಪಂಡಿತರು ಉಪಸ್ಥಿತರಿದ್ದರು.ರಾಸಾಯನ ಶಾಸ್ತ್ರದ ಉಪನ್ಯಾಸಕಿ ಚೈತ್ರ ಪ್ರಭು ಕಾಲೇಜಿನ ಪರವಾಗಿ ಗೌರವ ಕಾಣಿಕೆ ನೀಡಿದರು.ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಕೃಷ್ಣಪ್ರಸಾದ್ ನಿರೂಪಿಸಿ, ವಂದಿಸಿದರು.