


ಬೆಳಾಲು: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಯ ಇದರ ಶಾಲಾ ಸಂಸತ್ ನ ಚುನಾವಣೆ ಜೂ.10 ರಂದು 5 ಮೊಬೈಲ್ ಇವಿಎಂ ಹಾಗೂ ಒಂದು ಕಂಟ್ರೋಲ್ ಯುನಿಟ್ ಬಳಕೆಯೊಂದಿಗೆ ಶಾಲಾ ಸಂಸತ್ತಿನ 11 ಮಂದಿ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.ಚುನಾವಣೆಗೆ ಸ್ಪರ್ಧಿಸಿದ್ದ 27 ಮಂದಿ ವಿದ್ಯಾರ್ಥಿಗಳಲ್ಲಿ ಮುಖ್ಯಮಂತ್ರಿಯಾಗಿ 8 ನೇ ತರಗತಿಯ ರತೀಶ್ ಹಾಗೂ ಉಪಮುಖ್ಯ ಮಂತ್ರಿಯಾಗಿ 7 ನೇ ತರಗತಿಯ ಚರಣ್ ಆಯ್ಕೆಯದರರು.
ಗೃಹಮಂತ್ರಿಯಾಗಿ 8 ನೇ ತರಗತಿಯ ಸಮ್ಯಕ್ (ಅವಿರೋಧ ಆಯ್ಕೆ), ವಿದ್ಯಾ ಮಂತ್ರಿಯಾಗಿ 6 ನೇ ತರಗತಿ ದೀಕ್ಷಿತಾ, ಸಾಂಸ್ಕೃತಿಕ ಮಂತ್ರಿಯಾಗಿ 8 ನೇ ತರಗತಿ ಅಂಕಿತಾ, ಆಹಾರ ಮಂತ್ರಿಯಾಗಿ 8ನೇ ರಶ್ಮಿ, ನೀರಾವರಿ ಮಂತ್ರಿಯಾಗಿ ಸುಜನ್ 7ನೇ, ತೋಟಗಾರಿಕಾ ಮಂತ್ರಿಯಾಗಿ ಶ್ರವಣ್ ಪಿ. 6ನೇ, ಆಹಾರ ಮಂತ್ರಿಯಾಗಿ ಮೋಕ್ಷಿತಾ 8ನೇ, ಸ್ವಚ್ಛತಾ ಮಂತ್ರಿಯಾಗಿ ಅಭಿಲಾಷ್ 7ನೇ, ಕ್ರೀಡಾ ಮಂತ್ರಿಯಾಗಿ, ನಿಕ್ಷಿತ್
ಇವರು ಆಯ್ಕೆಯಾಗಿದ್ದಾರೆ.ವಿರೋಧ ಪಕ್ಷದ ನಾಯಕನಾಗಿ ಶೋಧನ್ 8ನೇ ಆಯ್ಕೆಯಾಗಿರುತ್ತಾರೆ.


ನೂತನವಾಗಿ ಆಯ್ಕೆಯಾದ ಮಂತ್ರಿಗಳಿಗೆ ಜೂ.12 ರಂದು ಮುಖ್ಯ ಶಿಕ್ಷಕ ವಿಠಲ್ ಎಂ ಪ್ರಮಾಣ ವಚನ ಬೋಧಿಸಿದರು.
ಚುನಾವಣಾ ಕಾರ್ಯದಲ್ಲಿ ಶಿಕ್ಷಕಿಯರಾದ ಜ್ಯೋತಿ ಎಂ. ಎಸ್, ಜಾನ್ಸಿ ಸಿ.ವಿ, ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.ಇವರಿಗೆ ಅತಿಥಿ ಶಿಕ್ಷಕರಾದ ಪ್ರಜ್ಞಾ ಹಾಗೂ ಗುರುಪ್ರಸನ್ನ ಸಹಕರಿಸಿದರು. ಚುನಾವಣಾ ಉಸ್ತುವಾರಿ ಶಿಕ್ಷಕ ಯೋಗೇಶ್ ಹೆಚ್. ಆರ್ ವ್ಯವಸ್ಥಿತವಾಗಿ ಸಂಘಟಿಸಿ ನೈಜ ಚುನಾವಣಾ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.








