ಜೆಸಿಐ ವಲಯ ಮಧ್ಯಂತರ ಸಮ್ಮೇಳನ – ಜೆಸಿಐ ಬೆಳ್ತಂಗಡಿ ಮಂಜುಶ್ರೀ ಚಾಂಪಿಯನ್

0

ಬೆಳ್ತಂಗಡಿ: ಜೆಸಿಐ ಜೋಡುಮಾರ್ಗ ನೇತ್ರಾವತಿ ಇವರ ಆತಿಥ್ಯದಲ್ಲಿ ನಡೆದ ಜೆಸಿಐ ಭಾರತದ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಲವು ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿದೆ.

ಘಟಕವು ಮಾಡಿದ ಎಲ್ಲಾ ಕೆಲಸಗಳನ್ನ ಗಣನೆಗೆ ತೆಗೆದುಕೊಂಡು ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.ಅದ್ಧೂರಿ‌ ಪದಪ್ರದಾನ, ವಲಯದ ಸ್ವಾಗತ್ ಕಾರ್ಯಕ್ರಮ, ಯುವ ದಿನಾಚರಣೆ, ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ, ಶಾಲೆ ಕಾಲೇಜುಗಳಲ್ಲಿ ತರಬೇತಿ, ಪತಿಸರ ದಿನ, ಸದಸ್ಯರಿಗೆ ತರಬೇತಿ ಕಾರ್ಯಾಗಾರ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡಿ ವಲಯದಲ್ಲಿ ಗುರುತಿಸಿಕ್ಕೊಂಡಿದ್ದ ಬೆಳ್ತಂಗಡಿ ಮಂಜುಶ್ರೀಗೆ ಅರ್ಹವಾಗಿಯೇ ಡೈಮಂಡ್ ಘಟಕ ಮತ್ತು ಅತ್ಯುತ್ತಮ ಘಟಕ ಪ್ರಶಸ್ತಿ ಒಲಿದು ಬಂದಿದೆ.

ಘಟಕವನ್ನು ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ನಾಯಕ, ವಲಯ ತರಬೇತುದಾರರಾದ ಜೆಸಿಐ ಬೆಳ್ತಂಗಡಿ ಅಧ್ಯಕ್ಷರಾದ ಶಂಕರ್ ರಾವ್ ರವರು ಅತ್ಯುತ್ತಮ ಅಧ್ಯಕ್ಷ ರನ್ನರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಷ್ಟೇ ಅಲ್ಲದೆ ಯುವ ದಿನಾಚರಣೆ, ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನದಂತ ಹಲವು ಕಾರ್ಯಕ್ರಮಗಳಿಗೆ ವಲಯದ ಮನ್ನಣೆ ದೊರಕಿದೆ.

ಸ್ಪರ್ಧೆಯಲ್ಲಿ ಚಾಂಪಿಯನ್ಸ್– ಮಧ್ಯಂತರ ಸಮ್ಮೇಳನದಲ್ಲಿ ನಡೆಸುವ ಹಲವು ಸ್ಪರ್ಧೆಗಳಲ್ಲಿ ಘಟಕವು ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡಿದೆ.

ಪ್ರತಿಷ್ಠಿತ ಘಟಕ ವೈಭವ ಸ್ಪರ್ಧೆಯಲ್ಲಿ ಘಟಕವು ನೀಡಿದ ನೇತ್ರಾವತಿ ನದಿ ತಿರುವು ಯೋಜನೆಯ ನೇತ್ರೆ ಕಾರ್ಯಕ್ರಮವು ಪ್ರಥಮ ಸ್ಥಾನವನ್ನ ಪಡೆದುಕೊಂಡಿದೆ.

ವಿಶೇಷವಾಗಿ ಘಟಕದ ಪೂರ್ವಾಧ್ಯಕ್ಷರು, ಅಧ್ಯಕ್ಷರು, ಸದಸ್ಯರೆಲ್ಲರು ಈ ಸ್ಪರ್ಧೆಯಲ್ಲಿ ಬಣ್ಣ ಹಚ್ಚಿದ್ದು, ಸ್ಮಿತೇಶ್ ಬಾರ್ಯ ನಿರ್ದೇಶನ‌ ಮಾಡಿದರು.

ಬ್ಯಾನರ್ ಡಿಸ್ ಪ್ಲೇ ಮತ್ತು ಸೋಶಿಯಲ್ ಮೀಡಿಯಾ ಕವರೇಜ್ ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಹಾಗೂ ವಯಕ್ತಿಕ ಸ್ಪರ್ಧೆಗಳಲ್ಲಿ, ಜೆಸಿ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಚಂದ್ರಹಾಸ್ ಬಳಂಜ ದ್ವಿತೀಯ, ಜೂನಿಯರ್ ಜೆಸಿ ಭಾಷಣ ಸ್ಪರ್ಧೆಯಲ್ಲಿ ಕು.ಕನ್ನಿಕಾ ದ್ವಿತೀಯ ಬಹುಮಾನ ಪಡೆದುಕ್ಕೊಂಡಿದ್ದಾರೆ.ಘಟಕದಲ್ಲಿ ಆಯೋಜಿಸಲಾಗಿದ್ದ ಹಲವಾರು ಕಾರ್ಯಕ್ರಮಗಳಿಗೆ ಒಟ್ಟು 14 ಪ್ರಶಸ್ತಿಗಳು ಲಭಿಸಿದೆ.

ಈ ಮಧ್ಯಂತರ ಸಮ್ಮೇಳನದಲ್ಲಿ ಘಟಕದ ಪೂರ್ವಧ್ಯಕ್ಷರುಗಳಾದ ಚಿದಾನಂದ ಇಡ್ಯಾ, ನಾರಾಯಣ ಶೆಟ್ಟಿ, ತುಕಾರಾಮ್ ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ಪ್ರಸಾದ್ ಬಿ. ಎಸ್, ಕಾರ್ಯದರ್ಶಿ ಸುಧೀರ್ ಕೆ. ಎನ್, ಉಪಾಧ್ಯಕ್ಷರುಗಳಾದ ರಂಜಿತ್, ಪ್ರೀತಮ್ ಶೆಟ್ಟಿ ಆಶಾಲತಾ ಪ್ರಶಾಂತ್, ರಕ್ಷಿತ್ ಅಂಡಿಂಜೆ ಸದಸ್ಯರುಗಳಾದ ಸೃಜನ್ ಆರ್ ರೈ, ಅನುದೀಪ್‌ ಜೈನ್, ಯಶವಂತ್ ಬೆಳ್ತಂಗಡಿ, ಅನನ್ಯ ಜೈನ್, ಬೇಬಿಂದ್ರ ಪಾಲ್ಗೊಂಡಿದ್ದರು, ಹಾಗು ಜೂನಿಯರ್ ಜೆಸಿ ಅಧ್ಯಕ್ಷ ರಾಮಕೃಷ್ಣ ಶರ್ಮಾ, ನೇವಿಲ್ ಮೋರಸ್,ದೀಪ್ತಿ, ಗಣ್ಯ, ತ್ರಿಷಾ,ಮತ್ತು ನಮ್ರತಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದರು.

p>

LEAVE A REPLY

Please enter your comment!
Please enter your name here