p>
ನೆರಿಯ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಪದಕೋಡಿ-ಬೀಜದಡಿ ರಸ್ತೆಯನ್ನು ಚಾರ್ಮಾಡಿ ಗ್ರಾಮದ ಪರ್ಲಾಣಿ ಶಾಲೆಯಲ್ಲಿ ಅಧ್ಯಾಪಕರಾಗಿರುವ ಶ್ರೀ ತಮ್ಮಯ್ಯ ಇವರು ಆದಿತ್ಯವಾರ ರಜೆ ಸಮಯದಲ್ಲಿ ತನ್ನೂರಿಗೆ ಹೋಗುವ ರಸ್ತೆಯನ್ನು ತಾನೇ ರಿಪೇರಿ ಮಾಡಿ ಮಾದರಿಯಾಗಿದ್ದಾರೆ. ರಸ್ತೆಯಲ್ಲಿ ಹುಲ್ಲುಕಡ್ಡಿ ಬಿದ್ದರೂ ಪಂಚಾಯತ್ ನವರೇ ಬದಿಗೆ ಹಾಕಬೇಕು ಎನ್ನುವವರೇ ಜಾಸ್ತಿ ಇರುವಾಗ ತನ್ನೂರಿನ ರಸ್ತೆಯನ್ನು ತಾನೇ ರಿಪೇರಿ ಮಾಡಿ ಎಲ್ಲರಿಗೂ ಮಾದರಿ ಅನಿಸಿಕೊಂಡಿದ್ದಾರೆ. ಇವರ ಈ ಪ್ರೇರಣಾದಾಯಿ ಕೆಲಸ ಗ್ರಾಮಸ್ಥರಿಗೆ ಮಾದರಿ ಎನಿಸಿದೆ.
p>