ಗ್ರಾ.ಪಂ.ಮಡಂತ್ಯಾರು ಹಾಗೂ ಇತರ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಣ್ಣು ಹಂಪಲು ಗಿಡ ವಿತರಣಾ ಕಾರ್ಯಕ್ರಮ

0

ಮಡಂತ್ಯಾರು : ಗ್ರಾಮ ಪಂಚಾಯತ್ ಮಡಂತ್ಯಾರು ಇದರ ವತಿಯಿಂದ ಜೆಸಿಐ ಮಡಂತ್ಯಾರು, ಸೇಕ್ರೆಡ್ ಹಾರ್ಟ್ ಕಾಲೇಜ್ ಎನ್.ಎಸ್.ಎಸ್. ಘಟಕ ಮತ್ತು ಎನ್.ಸಿ.ಸಿ. ಘಟಕ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ವಿಪತ್ತು ನಿರ್ವಹಣಾ ತಂಡ ಮಡಂತ್ಯಾರು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಜಲಮೂಲ ಸುಚಿತ್ವ ಮತ್ತು ಹಣ್ಣು ಹಂಪಲು ಗಿಡ ವಿತರಣಾ ಕಾರ್ಯಕ್ರಮವು ಗ್ರಾಮ ಪಂಚಾಯಿತಿ ಮಡಂತ್ಯಾರು ಪೆದ್ಯರಿ ನಲ್ಲಿ ನಡೆಯಿತು.

ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ, ಉಪದ್ಯಕ್ಷೆ ಶ್ರೀಮತಿ ಸಂಗೀತಾ ಶೆಟ್ಟಿ, ಪಂಚಾಯತ್ ಸದಸ್ಯ ವಿಶ್ವನಾಥ್ ಪೂಜಾರಿ, ಶ್ರಿಮತಿ ಮೋಹಿನಿ, ಕಿಶೋರ್ ಕುಮಾರ್ ಶೆಟ್ಟಿ, ಅಭಿವೃದ್ಧಿ ಅಧಕಾರಿ ಪುರುಷೋತ್ತಮ, ಜೆಸಿಐ ಮಡಂತ್ಯಾರು ಘಟಕದ ಪೂರ್ವಾಧ್ಯಕ್ಷರು, ವಲಯ 15ರ ಗೋಗ್ರಿನ್ ವಿಭಾಗದ ನಿರ್ದೇಶಕರಾದ ಜೇಸಿ ನವೀನ್ ಕೊಡ್ಲಕ್ಕೆ, ಘಟಕಾಧ್ಯಕ್ಷರಾದ ಜೇಸಿ ಅಶೋಕ್ ಗುಂಡಿಯಲ್ಕೆ, ಜೆಸಿಐ ಮಡಂತ್ಯಾರು ಘಟಕದ ನಿಕಟ ಪೂರ್ವಾಧ್ಯಕ್ಷರು, ವಲಯ ಉಪಾಧ್ಯಕ್ಷರಾದ ಜೇಸಿ ಭರತ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ಜೇಸಿ ಸಂಯುಕ್ತ್ ಕರ್ತಿಲ, ಎನ್.ಸಿ.ಸಿ ಮಡಂತ್ಯಾರು ಘಟಕದ ಮುಖ್ಯಸ್ಥರಾದ ಲೆಫ್ಟಿನೆಟ್ ಆಲ್ವಿನ್ ಕೆ.ಜಿ, ಎನ್ಎಸ್ಎಸ್ ಮಡಂತ್ಯಾರು ಘಟಕದ ಮುಖ್ಯಸ್ಥರಾದ ಪ್ರಶಾಂತ್ ಹಾಗೂ ಪುಂಜಾಲಕಟ್ಟೆ ಘಟಕದ ಮುಖ್ಯಸ್ಥರಾದ ಸಂತೋಷ್, ಗ್ರಾಮ ಪಂಚಾಯಿತಿ ಇದರ ಸಿಬ್ಬಂದಿ ವರ್ಗ, ಜೇಸಿ ಸದಸ್ಯರು, ಮಡಂತ್ಯಾರ್ ಮತ್ತು ಪುಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಂತರ ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆದ್ಯಾರು ಸೇತುವೆ ಬಲಿಯಲ್ಲಿ ಸುಚಿತ್ವ ಕಾರ್ಯವನ್ನ ಹಮ್ಮಿಕೊಳ್ಳಲಾಯಿತು.

LEAVE A REPLY

Please enter your comment!
Please enter your name here