


ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ವಿಶೇಷ ಕಾರ್ಯಕಾರಣಿ ಸಭೆಯು ಜೂನ್.9 ರಂದು ಲಾಯಿಲ ಸಂಗಮ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ವಕ್ತಾರ, ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಿಜೆಪಿ ಸೋಲಿನ ಮೆಟ್ಟಿಲನ್ನು ಹತ್ತಿಯೇ ಮೇಲೆ ಬಂದಿದ್ದು.ಬಿಜೆಪಿ ಕರ್ನಾಟಕದಲ್ಲಿ ನೇರ ಯುದ್ದದಲ್ಲಿ ಸೋತಿಲ್ಲ.ರಾಷ್ಟ್ರದ ಅಭಿವೃದ್ಧಿ, ಸಂಘಟನೆ, ವಿಚಾರದಲ್ಲಿ ಸೋಲಿಸಲು ಆಗುವುದಿಲ್ಲ.ಬದಲಾಗಿ ಸುಳ್ಳು ಹೇಳಿ ಹಿಟ್ಲರ್ ಮಾಡಿದ ತಂತ್ರದಂತೆ ಕಾಂಗ್ರೆಸ್ ಕರ್ನಾಟಕದಲ್ಲಿ ಗೆದ್ದಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮಂಡಲ ಉಸ್ತುವಾರಿ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲದ ಅಧ್ಯಕ್ಷ ಜಯಂತ್ ಕೊಟ್ಯಾನ್, ತಾಲೂಕು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಗಣೇಶ್ ಗೌಡ ನಾವೂರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.