ಉಜಿರೆ: ಎಸ್.ಡಿ.ಎಂ ವಸತಿ ಕಾಲೇಜಿನಲ್ಲಿ ಶೈಕ್ಷಣಿಕ ಮಾಹಿತಿ ಕಾರ್ಯಕ್ರಮ

0

ಉಜಿರೆ : ಹೆತ್ತವರು ‘ಜನತಾ ಬಜಾರು’ ಎಟಿಎಂ ಕಾರ್ಡ್ ರೀತಿ ಇರದೇ ‘ಗುರಿ ಕೇಂದ್ರೀಕೃತ ಹಾಗೂ ಸಂಸ್ಕಾರಯುತ ಕಲಿಕೆಗೆ ಬೆಂಬಲ ನೀಡುವುದು ಅತೀ ಅಗತ್ಯ’ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಬಿ. ಹೇಳಿದರು.ಅವರು ಜೂ.1 ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಹೆತ್ತವರಿಗೆ ನಡೆದ ‘ಶೈಕ್ಷಣಿಕ ಮಾಹಿತಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ಎಂ.ವೈ ಮಕ್ಕಳಿಗೆ ಆತ್ಮವಿಶ್ವಾಸ ತುಂಬುತಾ ಉನ್ನತ ಸಾಧನೆಗೆ ಪ್ರೇರಣೆ ನೀಡಿ ಎಂದು ಹೆತ್ತವರಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಸುನೀಲ್ ಪಂಡಿತ್, ಮಕ್ಕಳಿಗೆ ಕಲಿಕೆ ಜೊತೆಗೆ ತಂದೆ -ತಾಯಿಗಳ ನೋವು – ನಲಿವಿನ ಅರಿವು ಇರಲಿ, ‘ನಿಮ್ಮ ಪ್ರೀತಿ ಅವರ ಕಲಿಕೆಗೆ ಮಾರಕವಾಗದಿರಲಿ, ಹೆಗ್ಗಡೆಯವರ ಹಾಗೂ ಅಮ್ಮನವರ ಕನಸಿನಂತೆ ಹೆತ್ತವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಬದುಕಿಗೆ ದಾರಿದೀಪವಾಗಬೇಕು ಎಂದು ಹೇಳಿದರು.
ಉಪಪ್ರಾಂಶುಪಾಲ ಮನೀಷ್ ಕುಮಾರ್, ವಸತಿ ನಿಲಯದ ಪಾಲಕರದ ಲಕ್ಷ್ಮಣ್ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭೌತಶಾಸ್ತ್ರದ ಉಪನ್ಯಾಸಕ ವಿಕ್ರಂ ಅವರು ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here