ಕುಕ್ಕಾವು ಸ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

0

ಕುಕ್ಕಾವು: 2023-24 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್‍ಯಕ್ರಮವು ನಡೆಯುತ್ತಿದ್ದು, ಮಿತ್ತಬಾಗಿಲು ಗ್ರಾಮದ ಕುಕ್ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವವು ಮೇ.31ರಂದು ನಡೆಯಿತು.

ಶಾಲೆಯನ್ನು ತಳಿರು ತೋರಣ, ಬಣ್ಣದ ಕಾಗದ, ಬಲೂನುಗಳಿಂದ ಶೃಂಗಾರಿಸಲಾಯಿತು.ಮೊದಲನೆಯದಾಗಿ ಒಂದನೇ ತರಗತಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವನ್ನು ನೀಡಿ ಬರಮಾಡಿ, ಕಳುಹಿಸಲಾಯಿತು.

ನಂತರ ಪ್ರತಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ನೀಡಲಾಯಿತು.ಮದ್ಯಾಹ್ನ ಸಿಹಿಯಿಂದ ಕೂಡಿದ ಊಟ ನೀಡಲಾಯಿತು.

ಈ ಕಾರ್‍ಯಕ್ರಮದಲ್ಲಿ ಎಸ್‌ಡಿಎಂಸಿ ಅದ್ಯಕ್ಷರಾದ ಶ್ರೀಮತಿ ಬೇಬಿ, ಉಪಾದ್ಯಕ್ಷರಾದ ಶ್ರೀಮತಿ ಜಯಶ್ರೀ ಭಾಗವಹಿಸಿದರು.ಉಳಿದಂತೆ ವಿನಯ್, ಜಯಶ್ರಿ ಕೆ, ವಿನೋದ, ಪೂರ್ಣಿಮ ಹೂವಿನಗುಡ್ಡೆ, ರಮೇಶ್ ಕುಂಬಾರ, ಅತೀಜಮ್ಮ, ಬಶೀರ್ ಕುಕ್ಕಾವು ಶಿಕ್ಷಕರು ಇವರುಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here