ಪಟ್ರಮೆಯ ಪರಾಪ್ಪೆಯಲ್ಲಿ ಕಾಡಾನೆ ಪ್ರತ್ಯಕ್ಷ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಅನೇಕ ಕಡೆಗಳಲ್ಲಿ ಆನೆಗಳು ಪತ್ತೆಯಾಗುತ್ತಿದ್ದು, ಜೂ1 ರಂದು ನಿಡ್ಲೆ ಪರಿಸರದಲ್ಲಿ ಕಂಡುಬಂದಿದೆ.ಇದೀಗ ಜೂ02 ರಂದು ಮುಂಜಾನೆ ಧರ್ಮಸ್ಥಳದಿಂದ ಹಾದು ಹೋಗುವ ಪಟ್ರಮೆಯ ಪರಾಪ್ಪೆ ಎಂಬ ಪ್ರದೇಶದಲ್ಲಿ ಮೂರು ಆನೆಗಳು ಪತ್ತೆಯಾಗಿದೆ.

ಭಯಭೀತರಾಗಿ ಇದನ್ನು ಗಮನಿಸಿದ ಸ್ಥಳೀಯರು ಹಾಗೂ ಕೆಲಸಕ್ಕೆಂದು ತೆರಳುವ ಯುವಕರು ನೋಡಿ ಇತರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಅಲ್ಲದೆ, ವಾಟ್ಸಪ್ ಸಂದೇಶದ ಮೂಲಕ ಮಾಹಿತಿಯನ್ನು ರವಾನಿಸಿದ್ದಾರೆ.ಇತರ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ.

LEAVE A REPLY

Please enter your comment!
Please enter your name here