ಮುಂಡಾಜೆ: ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಉಪನ್ಯಾಸಕಿಯಾಗಿರುವ ಮುಂಡಾಜೆಯ ಆರಾಧನಾ ಮರಾಠೆ ಅವರು ಬಯೋಕೆಮಿಸ್ಟ್ರಿ ವಿಭಾಗದ ಸಹ ಪ್ರಾಧ್ಯಾಪಿಕೆ ಡಾ| ಗಾಯತ್ರಿ ಎಂ. ರಾವ್ ಮಾರ್ಗದರ್ಶನದಲ್ಲಿ ಮಂಡಿಸಿದ ‘ಇಫೆಕ್ಟ್ ಆಫ್ ಸ್ಟಾಂಡಿಯಾಸ್ ಪಿನ್ನಾಟಾ ಬಾರ್ಕ್ ಎಕ್ಸಾಕ್ಸ್ ಆನ್ ಆಕ್ಟಿವಿಟಿ ಆಫ್ ಇಂಟೆಸ್ಟೈನಲ್ ಬೀಟಾ ಅರೆಸ್ಟಿನ್ 1 ಆ್ಯಂಡ್ 2, ಟೋಲ್ ಲೈಕ್ ರಿಸೆಪ್ಟರ್-4 ಆ್ಯಂಡ್ ಇನ್ಪ್ಲಮೇಟರಿ ಮಾರ್ಕರ್ಸ್ ಇನ್ ಈಟೋಪೋಸೈಡ್ ಇಂಡ್ಯೂಸ್ಟ್ ಜಿಐಟಿ ಮ್ಯೂಕೋಸೈಟಿಸ್ ರಾಟ್ ಮೋಡೆಲ್’ ಎಂಬ ಸಂಶೋಧನ ಪ್ರಬಂಧಕ್ಕೆ ಮಣಿಪಾಲದ ಮಾಹೆ ಪಿಎಚ್.ಡಿ ನೀಡಿದೆ.
ಮುಂಡಾಜೆ ಸಂದೀಪ್ ಫಡಿಕೆಯವರ ಪತ್ನಿ.ಅವರು ಮಂಗಳೂರಿನ ಅಂಜಲಿ ಬರ್ವೆ ಮತ್ತು ಎ.ಎಸ್. ವಸಂತ ಮರಾಠಯವರ ಪುತ್ರಿ.
p>