ನಿಟ್ಟಡೆ ಸ. ಹಿ. ಪ್ರಾ. ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

0

ಕುಂಡದಬೆಟ್ಟು :ಸ.ಉ. ಹಿ.ಪ್ರಾ ಶಾಲೆ ನಿಟ್ಟಡೆಯಲ್ಲಿ ಮೇ 31 ರಂದು ಶಾಲಾ ಪ್ರಾರಂಭೋತ್ಸವ ನಡೆಯಿತು.

ಹೊಸದಾಗಿ ದಾಖಲಾದ 1ನೇ ತರಗತಿ ಮಕ್ಕಳನ್ನು ಕಿರೀಟ ತೊಡಿಸಿ, ನೋಟ್ ಪುಸ್ತಕ ಪೆನ್ಸಿಲ್ ನೀಡಿ ಸ್ವಾಗತಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮದ್ ಅಶ್ರಫ್ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತಾ ಮತ್ತು ಶ್ರೀಮತಿ ರಜನಿ ಆಗಮಿಸಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಇಲಾಖೆಯಿಂದ ನೀಡಿದ ಪಠ್ಯಪುಸ್ತಕಗಳು ಸಮವಸ್ತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಸದಸ್ಯರು ಪೋಷಕರು ಮಕ್ಕಳು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಆರತಿ ಸ್ವಾಗತಿಸಿದರು. ಅನಿತಾ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಪದ್ಮಾವತಿ ವಂದಿಸಿದರು.S D M C ವತಿಯಿಂದ ಸಿಹಿ ವಿತರಿಸಲಾಯಿತು. ಮಧ್ಯಾಹ್ನ ಎಲ್ಲರಿಗೂ ಪಾಯಸದ ಊಟ ನೀಡಲಾಯಿತು.

LEAVE A REPLY

Please enter your comment!
Please enter your name here