ಎಸ್.ಡಿ.ಎಂ ನಲ್ಲಿ ಕೌಶಲ್ಯಾಧಾರಿತ ತರಬೇತಿ ಕಾರ್ಯಾಗಾರ

0

ಉಜಿರೆ: ಸಮಕಾಲಿನ ಜಗತ್ತಿನಲ್ಲಿ ಉದ್ಯೋಗಾವಕಾಶಗಳು ಮತ್ತು ಹೊಸ ಕೌಶಲ್ಯ ಅಭಿವೃದ್ಧಿ ಎಂಬ ವಿಷಯದ ಬಗ್ಗೆ ಕೌಶಲ್ಯಾ ಧಾರಿತ ತರಬೇತಿ ಕಾರ್ಯಗಾರವು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಜರಗಿತು.

ಮುಂಬೈಯ ಯೂನಿವರ್ಸಲ್ ಬಿಸಿನೆಸ್ ಸ್ಕೂಲ್ ನ ವೃತ್ತಿಪರ ತರಬೇತುದಾರ ಇಂದ್ರ ಪಾಲ್ ಸಿಂಗ್ ಅವರು ಪ್ರಧಾನ ತರಬೇತುದಾರರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.ಪದವಿ ವಿದ್ಯಾಭ್ಯಾಸವನ್ನು ಪೂರೈಸಿದ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವಾಗ ಹೊಂದಿರಬೇಕಾದ ಜ್ಞಾನ, ಮನೋಧರ್ಮ ಹಾಗೂ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮಟ್ಟುವ ರೀತಿಯಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಿದರು.

ಬಿಹಾರ ಮೂಲದ ಉದ್ಯಮಶೀಲ ತರಬೇತುದಾರ ಶಶಿರಂಜನ್ ಅವರು ಸಹ ತರಬೇತುದಾರರಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ ಏ ಕುಮಾರ್ ಹೆಗ್ಡೆ ಅವರ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಈ ರೀತಿಯ ತರಬೇತಿ ಕಾರ್ಯಕ್ರಮಗಳ ಸಂಪೂರ್ಣ ಸದುಪಯೋಗ ಪಡಿಸಿಕೊಂಡು ಭವಿಷ್ಯದ ಭದ್ರತೆಯ ಬಗ್ಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕೆಂದು ಆಶಿಸಿದರು.

ಎಸ್ ಡಿ ಎಮ್ ವೃತ್ತಿ ಮಾರ್ಗದರ್ಶನ ಕೇಂದ್ರದ ಡಾ. ನಾಗರಾಜ್ ಪೂಜಾರ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.

p>

LEAVE A REPLY

Please enter your comment!
Please enter your name here