ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಮತ್ತು ಮಾನಹಾನಿಕಾರಕ ಸುದ್ದಿಗಳನ್ನು ಹರಡಿ ತೇಜೋವಧೆ ಮಾಡುತ್ತಿರುವ ಶೇಖರ್ ಲಾಯಿಲ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಬ್ಲಾಕ್ ಸಮಿತಿ (ನಗರ) ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ಯೂತ್ ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ (ಗ್ರಾಮೀಣ) ಅಧ್ಯಕ್ಷ ರಂಜನ್ ಜಿ.ಗೌಡರವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶೇಖರ ಲಾಯಿಲ ನಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿದ ಬಗ್ಗೆ ಮೇ.29 ರಂದು ಬೆಳಿಗ್ಗೆ 10 ಗಂಟೆಗೆ ಪಕ್ಷದ ಕಾರ್ಯಕರ್ತರು ಕರೆ ಮಾಡಿ ತಿಳಿಸಿದ್ದರು.ಬಳಿಕ ನಾವು ಡಿ.ಸಿ.ಸಿ. ಕೊಕ್ಕಡದಲ್ಲಿ ನೋಡಿದಾಗ ನಮಗೆ ಆಘಾತವಾಯಿತು ಮತ್ತು ತುಂಬಾ ಧೈರ್ಯ ಕುಂದಿದೆವು.ಆ ನಂತರ ಸುಮಾರು 25 ರಿಂದ 30 ಕಾರ್ಯಕರ್ತರು ಕರೆ ಮಾಡಿದಾಗ ಬಹಳಷ್ಟು ಮಾನಸಿಕ ಹಿಂಸೆಗೊಳಗಾಗಿ, ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತೇವೆ.ಈ ಕೃತ್ಯದಿಂದಾಗಿ ವ್ಯವಹಾರದಲ್ಲಿ ಕೂಡ ನಮಗೆ ನಷ್ಟ ಉಂಟಾಗಿದೆ ಮತ್ತು ನಮ್ಮ ಮಾನಸಿಕ ಸ್ಥಿತಿಯು ಹದಗೆಟ್ಟಿದೆ.ಆದ್ದರಿಂದ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ಮಾನಹಾನಿಕಾರಕ ಸುದ್ದಿ ಹರಡಿದ ಆರೋಪ: ಶೇಖರ್ ಲಾಯಿಲ ವಿರುದ್ಧ ಕಾಂಗ್ರೆಸ್ ಮುಖಂಡರಿಂದ ಪೊಲೀಸ್ ಠಾಣೆಗೆ ದೂರು
p>