ಮಾಲಾಡಿ: ಅಣೆಕಟ್ಟಿನ ಸ್ವಚ್ಛತಾ ಹಾಗೂ ಹಲಗೆಗಳ ತೆರವು ಕಾರ್ಯಕ್ರಮ

0

ಮಾಲಾಡಿ: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ಎನ್‌.ಸಿ.ಸಿ ಮತ್ತು ಎನ್‌.ಎಸ್‌.ಎಸ್ ಘಟಕದ ವತಿಯಿಂದ ಮೇ 27 ರಂದು ಮಾಲಾಡಿ ಅಣೆಕಟ್ಟಿನ ಹಲಗೆಗಳ ತೆರವು ಹಾಗೂ ಸ್ವಚ್ಛತಾ ಕೆಲಸವನ್ನು ಆಯೋಜಿಸಲಾಗಿತ್ತು.ಈ ಪ್ರಕ್ರಿಯೆಯಲ್ಲಿ ಎನ್‌ಸಿಸಿ ಕೆಡೆಟ್‌ಗಳು, ಮತ್ತು ಎನ್‌.ಎಸ್‌.ಎಸ್ ಸ್ವಯಂಸೇವಕರು ಅಣೆಕಟ್ಟಿನ ಮರದ ಹಲಗೆಗಳು ಮತ್ತು ಇತರ ವಸ್ತುಗಳನ್ನು ತೆಗೆದುಹಾಕುವ ಮೂಲಕ ನೀರು ಸರಾಗವಾಗಿ ಹರಿಯುವುದನ್ನು ಖಾತರಿಪಡಿಸಿದರು.

ಈ ಕಾರ್ಯಕ್ರಮದಲ್ಲಿ ಎನ್‌.ಸಿ.ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಅಲ್ವಿನ್ ಕೆ.ಜಿ , ಎನ್‌.ಎಸ್‌.ಎಸ್ ಸಂಯೋಜಕರಾದ ಶ್ರೀ ಪ್ರಶಾಂತ್ ಎಮ್ ಭಾಗವಹಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here