ಶ್ರೀ ಧ.ಮಂ ಶಿಕ್ಷಣ ಸಂಸ್ಥೆಯ ವತಿಯಿಂದ ಚಾಲಕರಿಗೆ ಒಂದು ದಿನದ ಕಾರ್ಯಾಗಾರ

0

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಅನೇಕ ಜನ ಚಾಲಕರಿದ್ದು ಚಾಲಕರ ಜವಾಬ್ದಾರಿಯನ್ನು ನೆನಪಿಸುವ ಸಲುವಾಗಿ ಹಾಗೂ ಅವರ ಕರ್ತವ್ಯಗಳನ್ನು ತಿಳಿಯಪಡಿಸಲು ಚಾಲಕರಿಗಾಗಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಗಾರವನ್ನು ಶ್ರೀಯುತ ಚರಣ್ ಬ್ರೇಕ್ ಇನ್ಸ್ಪೆಕ್ಟರ್ ಆರ್ ಟಿ ಓ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಮಾತನಾಡಿದ ಅವರು ಒಂದು ಶಿಕ್ಷಣ ಸಂಸ್ಥೆಯ ಚಾಲಕರಿಗೆ ಶಿಕ್ಷಕರಷ್ಟೇ ಜವಾಬ್ದಾರಿ ಇರುತ್ತದೆ. ಅವರಷ್ಟೇ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಆದಷ್ಟು ಜಾಗರೂಕತೆಯಿಂದ ವರ್ತಿಸಬೇಕಾಗುತ್ತದೆ. ಆದಷ್ಟು ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ವಾಹನಗಳ ಮಧ್ಯ ಅಂತರವನ್ನು ಕಾಯ್ದುಕೊಂಡು ಜಾಗರೂಕತೆಯಿಂದ ವಾಹನವನ್ನು ಚಲಾಯಿಸಬೇಕು. ಎಲ್ಲರ ಜವಾಬ್ದಾರಿ ಚಾಲಕರ ಮೇಲೆ ಇರುವುದರಿಂದ ಅತ್ಯಂತ ನಿಗ ವಹಿಸಿ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ನುಡಿದರು. ತದ ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಸತೀಶ್ ಚಂದ್ರ ಮಾತನಾಡಿ ಚಾಲಕರ ಕೆಲಸ ಅತ್ಯಂತ ಜವಾಬ್ದಾರಿಯುತ ಕೆಲಸವಾಗಿದ್ದು ಎಲ್ಲರನ್ನು ಅತ್ಯಂತ ಜಾಗರೂಕತೆಯಿಂದ ದಡಮುಟ್ಟಿಸುವ ನಾವಿಕನ ಕೆಲಸವನ್ನು ಮಾಡುತ್ತಾರೆ. ಮೈಯೆಲ್ಲಾ ಕಣ್ಣಾಗಿಸಿ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸಿ ಜವಾಬ್ದಾರಿಯುತವಾಗಿ ಚಾಲಕರು ನಡೆದುಕೊಳ್ಳಬೇಕಾಗುತ್ತದೆ. ಒಂದು ಶಿಕ್ಷಣ ಸಂಸ್ಥೆಯ ಚಾಲಕರು ಅತ್ಯಂತ ಮುತುವರ್ಜಿಯಿಂದ ಹಾಗೂ ಚಾಣಾಕ್ಷತನದಿಂದ ತೀಕ್ಷಣಮತಿಗಳಾಗಿ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ ಎಂದು ಚಾಲಕರಿಗೆ ತಮ್ಮ ಜವಾಬ್ದಾರಿಯ ಅರಿವು ಮೂಡಿಸಿದರು.

ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಸ್ವರಾಜ್ ಮಸ್ದ ಇದರ ಸೇವಾ ಅಭಿಯಂತರ ಆಗಿರುವ ಶ್ರೀಯುತ ಆನಂದ್ ಆಗಮಿಸಿದ್ದರು. ಇವರು ಚಾಲಕರ ಕರ್ತವ್ಯ , ಅದನ್ನು ನಿಭಾಯಿಸುವ ರೀತಿ,ಸಮಸ್ಯೆಗಳು ಎದುರಾದಾಗ ಎದುರಿಸುವ ರೀತಿ ಎಂಬಿತ್ಯಾದಿ ಚಾಲಕರಿಗೆ ಉಪಯುಕ್ತವಾದ ಹತ್ತು ಹಲವು ಮಾಹಿತಿಗಳನ್ನು ನೀಡಿದರು. ಶ್ರೀಯುತ ಶ್ರೆಯಾಂಸ್ ಜೈನ್ ನಿರೂಪಿಸಿ ವಂದಿಸಿದ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಇ ಉಜಿರೆ ಇದರ ಮುಖ್ಯೋಪಾಧ್ಯಾಯರಾಗಿರುವ ಶ್ರೀಯುತ ಮನಮೋಹನ್ ನಾಯಕ್ ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಶ್ರೀಯುತ ಬಿ ಸೋಮಶೇಖರ್ ಶೆಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಶ್ರೀಯುತ ನಿಶಿತ್ ಭಾಗವಹಿಸಿದ್ದರು. ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಚಾಲಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

p>

LEAVE A REPLY

Please enter your comment!
Please enter your name here