


2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಆದಾಗ್ಯೂ, ನೋಟುಗಳು ಸೆಪ್ಟೆಂಬರ್ 30ರ ವರೆಗೆ ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತದೆ ಎಂದು ಕೇಂದ್ರ ಬ್ಯಾಂಕ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಬ್ಯಾಂಕ್ ಗಳು 2000 ಮುಖಬೆಲೆಯ ನೋಟಗಳನ್ನು ಜಾರಿಗೊಳಿಸದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಆರ್ ಬಿ ಐ ಆದೇಶ ಹೊರಡಿಸಿದೆ. ಸಾರ್ವಜನಿಕರು ತಮ್ಮಲ್ಲಿರುವ 2000 ರೂ ನೋಟುಗಳನ್ನು ಬ್ಯಾಂಕ್ ಗಳಿಗೆ ನೀಡಿ ಇತರ ಮುಖ ಬೆಲೆ ನೋಟುಗಳನ್ನು ಪಡೆಯಬಹುದು ಎಂದು ಬ್ಯಾಂಕ್ ತಿಳಿಸಿದೆ.