


ಬೆಳ್ತಂಗಡಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಗೆದ್ದ ಹಿನ್ನಲೆಯಲ್ಲಿ ಇಬ್ಬರು ಯುವಕರು ಅಳದಂಗಡಿಯ ಸತ್ಯದೇವತೆ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಮುಂಜಾನೆ 3.30ಕ್ಕೆ ಹೊರಟ ಅಜಿತ್ ಪೂಜಾರಿ ಕನ್ಯಾಡಿ ಹಾಗೂ ಅಜಿತ್ ಕುಮಾರ್ ಚಾರ್ಮಾಡಿ ಇಂದು ಬೆಳಗ್ಗೆ 9.30ರ ಸುಮಾರಿಗೆ ಅಳದಂಗಡಿಯ ಸತ್ಯದೇವತೆಯ ದರ್ಶನ ಪಡೆದಿದ್ದಾರೆ.ಇವರಲ್ಲಿ ಅಜಿತ್ ಕುಮಾರ್ ಕನ್ಯಾಡಿ ಬರೆದಂತಹ ಹರೀಶ್ ಪೂಂಜರ ಪರ ಹಾಡು ಚುನಾವಣಾ ಸಮಯದಲ್ಲಿ ಭಾರಿ ಸದ್ದು ಮಾಡಿತು.
ದೇವರ ದರ್ಶನ ಪಡೆದು ಪ್ರಸಾದವನ್ನು ಶಾಸಕರಿಗೆ ನೀಡಲು ಯುವಕರು ಅವರ ಮನೆಗೆ ತೆರಳಿದ್ದಾರೆ.