ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರ ತಂಡವೊಂದು ನನಗೆ ಹಲ್ಲೆ ನಡೆಸಿದೆ ಎಂದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಂಗ್ರೆಸ್ ಕಾರ್ಯಕರ್ತ ದಯಾನಂದ ಪೂಜಾರಿ ಎಂಬವರು ಆರೋಪಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪೇರಾಡಿ ಎಂಬಲ್ಲಿ ಬಿಜೆಪಿ ವಿಜಯೋತ್ಸವ ನಡೆಯುತ್ತಿತ್ತು. 150 ಬಿಜೆಪಿ ಕಾರ್ಯಕರ್ತರ ತಂಡ ಇತ್ತು. ವಿಜಯಾ ವೈನ್ ಶಾಪ್ ಬಳಿ ಮೆರವಣಿಗೆ ಬಂದಾಗ ಅಲ್ಲಿಯೇ ಇದ್ದ ನನ್ನನ್ನು ಬರುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದರು. ನಾನು ಬರಲ್ಲ ಎಂದರೂ ಬಲವಂತವಾಗಿ ವಿಜಯೋತ್ಸವಕ್ಕೆ ಎಳೆದುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದಯಾನಂದ ಪೂಜಾರಿ ಆರೋಪಿಸಿದ್ದಾರೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಆಸ್ಪತ್ರೆಗೆ ಮಾಜಿ ಶಾಸಕ ವಸಂತ ಬಂಗೇರ , ರಕ್ಷಿತ್ ಶಿವರಾಂ ಹಾಗೂ ಕಾರ್ಯಕರ್ತರು ಭೇಟಿ ನೀಡಿದ್ದಾರೆ.
ಈ ಸಂಧರ್ಭದಲ್ಲಿ ರಕ್ಷಿತ್ ಶಿವರಾಮ್ ಅಪರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಂಡು ಮುಂದಕ್ಕೆ ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.