ಬೆಳ್ತಂಗಡಿ: ಕರ್ನಾಟಕ ವಿಧಾನ ಸಭೆ ಚುನಾವಣೆ 2023 ರ ಮತ ಎಣಿಕೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಾನ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 13-5-2023 ರಂದು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಮಾಡಿರುತ್ತಾರೆ.
ಸದರಿ ಆದೇಶದಂತೆ ದಿನಾಂಕ 13-5-2023 ರಂದು ಬೆಳಿಗ್ಗೆ 5.00 ಗಂಟೆಯಿಂದ ಮಧ್ಯರಾತ್ರಿ 12.00ಗಂಟೆ ವರೆಗೆ–
1) ಜಿಲ್ಲೆಯಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು, ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿದೆ.
2)ಯಾವುದೇ ರೀತಿಯ ಮಾರಕಾಸ್ತ್ರಗಳನ್ನು, ಕಲ್ಲು, ಕ್ಷಾರಕ ವಸ್ತುಗಳು, ಸ್ಫೋಟಕಗಳನ್ನು ಸಂಗ್ರಹಿಸುವುದು, ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
3)ಯಾವುದೇ ಪ್ರತಿಕೃತಿ ಪ್ರದರ್ಶನ ಅಥವಾ ಸುಡುವುದನ್ನು ನಿಷೇಧಿಸಲಾಗಿದೆ.
4)ಯಾವುದೇ ಬಹಿರಂಗ ಘೋಷಣೆ ಕೂಗುವುದು, ವಾದ್ಯ ಬಾರಿಸುವುದು, ಪದ ಹಾಡುವುದು, ನಕಲಿ ಪ್ರದರ್ಶನ,ಪ್ರಚೋದನಕಾರಿ ಘೋಷಣೆ ಕೂಗುವುದು, ವ್ಯಕ್ತಿಗಳ ತೆಜೋವಧೆ ಮಾಡುವ ಕೃತ್ಯಗಳು ಇತ್ಯಾದಿಗಳನ್ನು ನಿಷೇಧಿಸಿದೆ.
5)ಸಾರ್ವಜನಿಕ ಗಾಂಭಿರ್ಯ, ನೈತಿಕತೆ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯದಲ್ಲಿ ತೊಡಗುವುದನ್ನು ನಿಷೇಧಿಸಿದೆ.
ಈ ಮೇಲ್ಕಂಡ ಆದೇಶವನ್ನು ಉಲ್ಲಂಘಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.ಈ ಆದೇಶ ಜಾರಿ ಮಾಡುವಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.