ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಚಾರ ಸಭೆಯು ಮೇ.8ರಂದು ಬೆಳ್ತಂಗಡಿ ಆಟೋ ರಿಕ್ಷಾ ನಿಲ್ದಾಣದ ಬಳಿ ನಡೆಯಿತು.
ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರದಲ್ಲಿ ಬಿಜೆಪಿ ಅಭೂತಪೂರ್ವವಾಗಿ 50ಸಾವಿರ ಮತದಿಂದ ಗೆಲ್ಲುತ್ತದೆ, ಬೆಳ್ತಂಗಡಿಯು ಅಭಿವೃದ್ಧಿಯ ಗಣಿಯಾಗಿದೆ.ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿ ಮನೆ ನಿರ್ಮಾಣದ ಕಾರ್ಯವನ್ನು ಮಾಡಿದ್ದಾರೆ,4 ವರ್ಷದ ಅವಧಿಯಲ್ಲಿ 3500 ಸಾವಿರ ಕೋಟಿ ಅನುದಾನವನ್ನು ತಾಲೂಕಿಗೆ ತಂದಿದ್ದಾರೆ.ರಾಷ್ಟ್ರದಲ್ಲಿ ಪರಿವರ್ತನೆಯ ಕಾಲ ಬಂದಿದೆ.ಸಾಂಸ್ಕೃತಿಕ ಭಾರತ ಎದ್ದು ನಿಂತಿದೆ.ಕಾಂಗ್ರೇಸ್ ಗೆಲ್ಲುತ್ತದೆ ಎಂಬ ಗ್ಯಾರಂಟಿ ಇಲ್ಲ ಅದಿಕ್ಕೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ವಸಂತ ಬಂಗೇರು ಪ್ರಥಮ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲಿಸಿದ ಕ್ಷೇತ್ರಯಿದು.ಆದ್ದರಿಂದ ಈ ಕ್ಷೇತ್ರವು ಬಿಜೆಪಿಯ ಪ್ರಬಾಲ್ಯವನ್ನು ಹೊಂದಿದೆ.ಹರೀಶ್ ಪೂಂಜರನ್ನು ವಿಧಾನಸಭಾದ ಮೆಟ್ಟಿಲು ಹತ್ತಿಸುವ ಸಂಕಲ್ಪ ಕಾರ್ಯಕರ್ತರದ್ದು ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಕಿಂಡಿ ಅಣೆಕಟ್ಟು, ತಾಲೂಕಿನೆಲ್ಲೆಡೆ ರಸ್ತೆಯನ್ನು ನಿರ್ಮಾಣ ಮಾಡಿ, ಬೆಳ್ತಂಗಡಿಯನ್ನು ಅಭಿವೃದ್ಧಿಯ ಪಥದತ್ತ ಸಾಗಿಸಿ ಬೆಳ್ತಂಗಡಿಯ ಶ್ರಮಿಕನಾಗಿದ್ದೇನೆ. ಪ್ರಾಮಾಣಿಕ ಜನ ಸೇವಕನಾಗಿ ಕಾರ್ಯನಿರ್ವಹಿಸುತ್ತೆನೆ, ನನ್ನ ಬದುಕು ಸಮಾಜ ಸೇವೆಗೆ ಅರ್ಪಣೆ.ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಕಾರ್ಯವನ್ನು ಮಾಡಿದ್ದೇನೆ.ಮುಂದಿನ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಉಳಿದ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇನೆ.ತಾಲೂಕಿನಲ್ಲಿ ಕೈಗಾರಿಕಾ ವಲಯವನ್ನು ನಿರ್ಮಿಸಿ 2500 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾರ್ಯವನ್ನು ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾ.ಜ.ಪಾ ಜಿಲ್ಲಾಧ್ಯಕ್ಷ ಸುದರ್ಶನ್, ವಿಧಾನಸಭಾ ಪರಿಷತ್ ಸದಸ್ಯ ಶಾಸಕ ಪ್ರತಾಪ್ ಸಿಂಹ ನಾಯಕ್ , ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕುಶಾಲಪ್ಪ ಗೌಡ ಪೂವಜೆ, ಜಯಾನಂದ, ಅಜಿತ್ ಅರಿಗ, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಮುಗುಳಿ ನಾರಾಯಣ ಭಟ್, ಧರ್ಣಪ್ಪ, ಅನೀಶ್, ಹಿತೇಶ್ ಉಪಸ್ಥಿತರಿದ್ದರು.